ಜಮ್ಮು ಮತ್ತು ಕಾಶ್ಮೀರ : ಪ್ರಕೃತಿ ವಿಕೋಪ, ಹತ್ತಾರು ನಿಯಮಗಳ ಮಧ್ಯೆಯೂ ಈ ಬಾರಿಯ ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಯಾತ್ರಿಕರು ಪಾಲ್ಗೊಂಡಿದ್ದಾರೆ.
ಈವರೆಗೆ 3,69,288 ಯಾತ್ರಿಕರು ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಆಗಸ್ಟ್‌ವರೆಗೂ ಯಾತ್ರೆ ಇರಲಿದ್ದು ಯಾತ್ರಿಕರ ಸಂಖ್ಯೆ ಹೆಚ್ಚಾಗಲಿದೆ. ಕಳೆದ ವರ್ಷದ 3,65,751 ಯಾತ್ರಿಗಳು ಪ್ರವಾಸ ಕೈಗೊಂಡಿದ್ದರು.
ಶುಕ್ರವಾರವೂ 2,155 ಜನರಿದ್ದ ತಂಡ ಭಗವತಿ ಕ್ಯಾಂಪ್‌ನಿಂದ ದರ್ಶನಕ್ಕೆ ತೆರಳಿದೆ.
ಗುರುವಾರ 9 ಸಾವಿರ ಯಾತ್ರಿಗಳು ದೇವರ ದರ್ಶನ ಪಡೆದಿದ್ದಾರೆ.
ಜುಲೈ 1 ರಿಂದ ಆರಂಭವಾದ ಈ ಬಾರಿಯ ಅಮರನಾಥ ಯಾತ್ರೆಯಲ್ಲಿ ಇದುವರೆಗೆ 36 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಗಸ್ಟ್31ಕ್ಕೆ ಈ ವರ್ಷದ 62 ದಿನಗಳ ಅಮರನಾಥ ಯಾತ್ರೆ ಅಂತ್ಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.