ಕೋಲ್ಕತ್ತ:ಮೊದಲ ಬಾರಿ ಸಂಸದೆಯಾಗಿ ಆಯ್ಕೆಯಾದ ಬಂಗಾಳಿ ನಟಿ ನುಸ್ರತ್ ಜಹಾನ್ ಹಣೆಯಲ್ಲಿ ಸಿಂಧೂರ, ಕೈ ತುಂಬಾ ಬಳೆತೊಟ್ಟು ಸಂಸತ್ತಿಗೆ ಬಂದಿದ್ದರು. ನುಸ್ರತ್ ಅವರ ಈ ವೇಷಭೂಷದ ಬಗ್ಗೆ ಟೀಕೆಗಳು ಕೇಳಿ ಬಂದಿತ್ತು.
ಇದಕ್ಕೆಪ್ರತಿಕ್ರಿಯಿಸಿದ ನುಸ್ರತ್, ನಾನು ಜಾತಿ, ಪಂಥ ಮತ್ತು ಧರ್ಮಗಳ ತಡೆಗೋಡೆಯಿಂದಾಚೆಯಿರುವ ಎಲ್ಲರನ್ನೊಳಗೊಂಡ ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ಟ್ವೀಟಿಸಿದ್ದಾರೆ.
ನಾನು ಈಗಲೂ ಮುಸ್ಲಿಂ ಆಗಿದ್ದರೂ, ಎಲ್ಲ ಧರ್ಮವನ್ನು ಗೌರವಿಸುತ್ತೇನೆ. ನನ್ನ ಉಡುಗೆಯ ಆಯ್ಕೆ ಬಗ್ಗೆ ಯಾರೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ.ನಂಬಿಕೆಗಳು ಉಡುಗೆ ತೊಡುಗೆಯನ್ನು ಮೀರಿದ್ದು, ಎಲ್ಲ ಧರ್ಮಗಳ ತತ್ವ ಸಿದ್ಧಾಂತಗಳನ್ನು ಆಚರಿಸುವುದುಮತ್ತು ನಂಬುವುದು ಇದೆಲ್ಲವನ್ನೂಮೀರಿದ್ದು ಎಂದಿದ್ದಾರೆ ಈ ಸಂಸದೆ.
ಜೂನ್ 25ರಂದುಸಂಸತ್‌ನಲ್ಲಿ ಪ್ರಮಾಣವಚನ ಸಮಾರಂಭಕ್ಕೆ ನುಸ್ರತ್ ಇಸ್ಲಾಮಿಕ್ ಅಲ್ಲದ ರೀತಿಯ ಉಡುಗೆ ಧರಿಸಿಕೊಂಡು ಬಂದಿದ್ದರಿಂದ ಆಕೆಯ ವಿರುದ್ಧ ಮುಸ್ಲಿಂ ಪ್ರಚಾರಕರು ಫತ್ವಾ ಹೊರಡಿಸಿದ್ದರು.
ಯಾವುದೇ ಧರ್ಮದ ಬಗ್ಗೆ ಅದರ ಪ್ರಮುಖರ ಟೀಕೆಯನ್ನು ಗಮನಿಸಿ ಅದಕ್ಕೆ ಪ್ರತಿಕ್ರಿಯಿಸುವುದು ಕೂಡಾ ದ್ವೇಷ ಮತ್ತು ಹಿಂಸೆಗೆ ಕಾರಣವಾಗುತ್ತದೆ.ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದಿದ್ದಾರೆ ನುಸ್ರತ್.
29ರ ಹರೆಯದ ನುಸ್ರತ್ ಜೂನ್ 19ರಂದು ಟರ್ಕಿಯಲ್ಲಿ ನಿಖಿಲ್ ಜೈನ್ ಅವರನ್ನು ವಿವಾಹಿತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.