ಬರ್ಹಾಂಪುರ; ಕೋವಿಡ್‌ನಿಂದ ಮೃತಪಟ್ಟ ಮಹಿಳೆಯ ಕುಟುಂಬವೊಂದು ಸಿಲಿಕೋನ್‌ನಿಂದ ತಯಾರಿಸಿದ ಆಕೆಯ ಪ್ರತಿಮೆಯನ್ನು ತಮ್ಮ ಮನೆಯೊಳಗೆ ಸ್ಥಾಪಿಸಿ, ಪ್ರತಿ ನಿತ್ಯ, ಸೀರೆ, ಆಭರಣಗಳನ್ನು ತೊಡಿಸುವ ಮೂಲಕ ಆಕೆಯ ಉಪಸ್ಥಿತಿಯನ್ನು ಶಾಶ್ವತವಾಗಿ ತಮ್ಮೊಂದಿಗೆ ಉಳಿಸಿಕೊಂಡಿದೆ.
ಈ ಘಟನೆ ಒಡಿಶಾದ ಬರ್ಹಾಂಪುರದಲ್ಲಿ ನಡೆದಿದೆ.
‘ಕೋವಿಡ್’ ನನ್ನ ಪತ್ನಿಯನ್ನು ಕಿತ್ತುಕೊಂಡಿತು. ಇದರಿಂದ ನನ್ನ ಮಗಳು ತಾಯಿಯಿಲ್ಲದ ನೋವನ್ನು ಅನುಭವಿಸಿದಳು. ತಾಯಿಯ ಪತ್ರಿಮೆ ಮನೆಯೊಳಗೆ ನಿರ್ಮಿಸಬೇಕೆಂದು ಆಕೆ ನನ್ನೊಂದಿಗೆ ಕೇಳಿದಳು ಎಂದು ಉದ್ಯಮಿ ಪ್ರಶಾಂತ್ ಕುಮಾರ್ ನಾಯಕ್ ಹೇಳಿದ್ದಾರೆ.
'ನನ್ನ ಮಗಳು ಪ್ರತಿನಿತ್ಯ ತಾಯಿಯ ಪ್ರತಿಮೆಗೆ ಸೀರೆ, ಆಭರಣಗಳನ್ನು ತೊಡಿಸಿತ್ತಾಳೆ. ಇದರಿಂದ ಇಡೀ ಕುಟುಂಬ ಆಕೆಯ ಉಪಸ್ಥಿತಿಯನ್ನು ಪ್ರತಿಮೆ ಮೂಲಕ ನೋಡುತ್ತವೆ ಎಂದರು. ಆಕೆ ಜೀವಂತವಾಗಿದ್ದಾಗ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಿದ್ದಳು. ಈಗಲೂ ಈ ಪ್ರತಿಮೆ ಮೂಲಕ ನಮಗೆ ಸ್ಫೂರ್ತಿ ನೀಡುತ್ತಿದ್ದಾಳೆ' ಎಂದು ನಾಯಕ್ ತಿಳಿಸಿದ್ದಾರೆ.
ಬೆಂಗಳೂರು ಮೂಲದ ಶಿಲ್ಪಿಯೊಬ್ಬರು ಫೈಬರ್, ರಬ್ಬರ್ ಮತ್ತು ಸಿಲಿಕೋನ್ ಬಳಸಿ, ನನ್ನ ಅಮ್ಮನನ್ನು ಹೋಲುವ ಪ್ರತಿಮೆಯನ್ನು ನಿರ್ಮಿಸಲು ಸುಮಾರು ಒಂದು ವರ್ಷ ತೆಗೆದುಕೊಂಡರು. ಇದಕ್ಕೆ ಸುಮಾರು ₹8 ಲಕ್ಷ ವೆಚ್ಚ ತಗುಲಿತು. 2021 ಏಪ್ರಿಲ್‌ನಲ್ಲಿ ನನ್ನ ತಾಯಿಯನ್ನು ಕಳೆದುಕೊಂಡೆ ಎಂದು ಮಗಳು ದುಃಖವನ್ನು ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.