ಕೇಂದ್ರಪಡಾ: ಒಡಿಶಾದ ಕೇಂದ್ರಪಡಾ ಜಿಲ್ಲೆಯಲ್ಲಿ 33ರ ಹರೆಯದ ಅಧ್ಯಾಪಕರೊಬ್ಬರು ತಮ್ಮ ಮದುವೆಗೆ ವರದಕ್ಷಿಣೆ ಬೇಡ, ಅದರ ಬದಲು 1001 ಗಿಡಗಳನ್ನು ನೀಡಿದರೆ ಸಾಕು ಎಂದು ಎಂದು ವಧುವಿನ ಹೆತ್ತವರಿಗೆ ಹೇಳಿದ್ದಾರೆ.
ಸರೋತ್ ಕಾಂತಾ ಬಿಸ್ವಾಲ್ ಎಂಬ ಪರಿಸರ ಪ್ರೇಮಿಯೊಬ್ಬರು ತಮ್ಮ ಮದುವೆಯಲ್ಲಿ ಈ ರೀತಿಯ ಉಡುಗೊರೆ ಸ್ವೀಕರಿಸಿದ್ದಾರೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.
ಮದುವೆಯಲ್ಲಿ ವರದಕ್ಷಿಣೆ ಪದ್ದತಿಯನ್ನು ನಾನು ವಿರೋಧಿಸುತ್ತೇನೆ.ನನ್ನ ಬಾಲ್ಯದಿಂದಲೂ ನಾನು ಪರಿಸರ ಪ್ರೇಮಿ, ಹಾಗಾಗಿ ವರದಕ್ಷಿಣೆ ಬದಲು ಫಲ ನೀಡುವ 1001 ಗಿಡಗಳನ್ನು ಕೊಡಿ ಎಂದು ಕೇಳಿದ್ದೆ . ಶನಿವಾರ ನಮ್ಮ ವಿವಾಹ ನಡೆಯಿತು ಎಂದು ಬಿಸ್ವಾಲ್ ಹೇಳಿದ್ದಾರೆ.
ವಧುವಿನ ಗ್ರಾಮವಾದಅದಂಪುರ್‍ನಲ್ಲಿ ಸರಳವಾಗಿ ವಿವಾಹ ಕಾರ್ಯ ನೆರವೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.