ADVERTISEMENT

ದೀರ್ಘಾವಧಿ ಸಿ.ಎಂ: ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ಗೆ 2ನೇ ಸ್ಥಾನ 

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 14:44 IST
Last Updated 22 ಜುಲೈ 2023, 14:44 IST
ನವೀನ್ ಪಟ್ನಾಯಕ್
ನವೀನ್ ಪಟ್ನಾಯಕ್   

ಭುವನೇಶ್ವರ: ದೇಶದಲ್ಲಿ ದೀರ್ಘಾವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಮೀರಿಸಿರುವ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಎರಡನೇ ಸ್ಥಾನಕ್ಕೇರಿದ್ದಾರೆ. 

ಪಟ್ನಾಯಕ್‌ ಅವರು 2000ನೇ ಇಸವಿಯ ಮಾರ್ಚ್‌ 5ರಂದು ಒಡಿಶಾದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ಸತತ 5 ಬಾರಿ ಸಿಎಂ ಆಗಿರುವ ಅವರು, ಒಟ್ಟು 23 ವರ್ಷ 138 ದಿನ ಅಧಿಕಾರ ನಡೆಸಿದ್ದಾರೆ. 1977ರ ಜೂನ್‌ 21ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರು ಸತತ 23 ವರ್ಷ 137 ದಿನ ಆ ಸ್ಥಾನದಲ್ಲಿದ್ದರು. ಸದ್ಯ ಬಸು ಅವರ ದಾಖಲೆಯನ್ನು ಪಟ್ನಾಯಕ್‌  ಮುರಿದಿದ್ದಾರೆ. 

1994ರಿಂದ 2019ರ ವರೆಗೆ 24 ವರ್ಷಗಳಿಗೂ ಅಧಿಕ ಕಾಲ ಸಿಎಂ ಆಗಿದ್ದ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್‌ ಕುಮಾರ್‌ ಅವರು ಇಡೀ ದೇಶದಲ್ಲೇ ದೀರ್ಘಾವಧಿಗೆ ಸಿಎಂ ಆಗಿ ಸೇವೆ ಸಲ್ಲಿಸಿದವರಲ್ಲಿ ಮೊದಲಿಗರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.