ರಾಯಪುರ: ಜಲಾಶಯದಲ್ಲಿ ಬಿದ್ದ ದುಬಾರಿ ಬೆಲೆಯ ಮೊಬೈಲ್ ಫೋನ್ ಪಡೆಯಲು ಆಹಾರ ನೀರೀಕ್ಷಕ ರಾಜೇಶ್ ವಿಶ್ವಾಸ್ 41 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಜಲ ಸಂಪನ್ಮೂಲ ಇಲಾಖೆ ₹53 ಸಾವಿರ ದಂಡ ವಿಧಿಸಿದೆ.
ರಾಜೇಶ್ ಅವರು 4,104 ಕ್ಯೂಬಿಕ್ ಮೀಟರ್ (41 ಲಕ್ಷ ಲೀಟರ್) ನೀರನ್ನು ಪೋಲು ಮಾಡಿದ್ದಾರೆ. ಹೀಗಾಗಿ ಒಂದು ಕ್ಯೂಬಿಕ್ ಮೀಟರ್‌ಗೆ ₹10.50ರಂತೆ ₹43,092 ಹಾಗೂ ದಂಡವಾಗಿ ₹10 ಸಾವಿರ ಸೇರಿ ಒಟ್ಟು ₹53,092 ಅನ್ನು ಹತ್ತು ದಿನಗಳ ಒಳಗೆ ಇಲಾಖೆಗೆ ಪಾವತಿಸಬೇಕು ಎಂದು ಆದೇಶ ಹೊರಡಿಸಿದೆ.
ಅನುಮತಿ ಇಲ್ಲದೆ ನೀರು ಖಾಲಿ ಮಾಡಲು ಮೌಖಿಕ ಒಪ್ಪಿಗೆ ನೀಡಿದ್ದಕ್ಕೆ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗಾಧಿಕಾರಿ ಆರ್.ಕೆ ಧಿವಾರ್‌ಗೆ ಜಿಲ್ಲಾಧಿಕಾರಿ ಶೋಕಾಸ್ ನೋಟೀಸ್ ನೀಡಿದ್ದಾರೆ.
ಪರಲ್‌ಕೋಟ್ ಜಲಾಶಯಕ್ಕೆ ರಾಜೇಶ್ ವಿಶ್ವಾಸ್ ಅವರು ಸ್ನೇಹಿತರೊಂದಿಗೆ ರಜೆಯ ಸಮಯ ಕಳೆಯಲು ತೆರಳಿದ್ದಾಗ ಸೆಲ್ಫಿ ತೆಗೆಯುವ ವೇಳೆ ಒಂದು ಲಕ್ಷ ರೂಪಾಯಿಯ ಫೋನ್ ನೀರಿಗೆ ಬಿದ್ದಿತ್ತು. ಅದನ್ನು ಮರಳಿ ಪಡೆಯಲು ಡೀಸೆಲ್ ಪಂಪ್‌ಗಳ ಮೂಲಕ ನಾಲ್ಕು ದಿನಗಳಲ್ಲಿ 41 ಲಕ್ಷ ಲೀಟರ್ ನೀರನ್ನು ಜಲಾಶಯದಿಂದ ಹೊರಹಾಕಲಾಗಿತ್ತು.
ಇದನ್ನೂ ಓದಿ... ಫೋನ್‌ಗಾಗಿ 41 ಲಕ್ಷ ಲೀಟರ್ ನೀರು ಖಾಲಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.