ADVERTISEMENT

ಮಗುವನ್ನು ಮುದ್ದಾಡುತ್ತಿರುವ ಮೋದಿ;ಮುದ್ದಾದ ಫೋಟೊ ಎಂದು ಕಾಲೆಳೆದ ಒಮರ್ ಅಬ್ದುಲ್ಲಾ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 12:01 IST
Last Updated 23 ಜುಲೈ 2019, 12:01 IST
   

ನವದೆಹಲಿ: ಪುಟ್ಟ ಮಗುವನ್ನು ಮುದ್ದಾಡುತ್ತಿರುವ ಫೋಟೊವೊಂದನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಈ ಫೋಟೊ ಬಗ್ಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಕಾಲೆಳೆದಿದ್ದಾರೆ.

ಮುದ್ದಾದ ಚಿತ್ರಗಳು.ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ವಿಚಾರದ ಬಗ್ಗೆ ಪ್ರಧಾನಿ ವಿವರಣೆ ನೀಡಲಿ ಎಂದು ವಿಪಕ್ಷಗಳು ಕಿರುಚಾಡುತ್ತಿದ್ದರೆ ಮೋದಿಯವರು ಈ ರೀತಿಯ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟಿಸಿ ಏನು ಹೇಳಲು ಬಯಸುತ್ತಿದ್ದಾರೆ ಎಂದು ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಇವತ್ತು ಸಂಸತ್‌ಗೆ ವಿಶೇಷ ಗೆಳೆಯರೊಬ್ಬರು ನನ್ನನ್ನು ಭೇಟಿ ಮಾಡಲು ಬಂದಿದ್ದರು ಎಂಬ ಶೀರ್ಷಿಕೆಯೊಂದಿಗೆ ಮಗುವನ್ನು ಮುದ್ದಾಡುತ್ತಿರುವ ಫೋಟೊವನ್ನು ಮೋದಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ADVERTISEMENT

ಚಿತ್ರದಲ್ಲಿರುವ ಮಗು ಯಾರದ್ದು?
ಅಂದಹಾಗೆ ಮೋದಿ ಮುದ್ದಾಡುತ್ತಿರುವ ಮಗು ಯಾರದ್ದು ಎಂದು ಹಲವಾರು ನೆಟ್ಟಿಗರು ಪ್ರಶ್ನಿಸಿದ್ದಾರೆ.ಈ ಮಗು ಬಿಜೆಪಿ ಸಂಸದ ಸತ್ಯನಾರಾಯಣ್ ಜತಿಯಾ ಅವರ ಮೊಮ್ಮಗ ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.