ನವದೆಹಲಿ: ಕೊರೊನಾ ವೈರಸ್ ರೂಪಾಂತರ ತಳಿ ‘ಓಮೈಕ್ರಾನ್’ ಸೋಂಕು ಮನುಷ್ಯನ ಶ್ವಾಸಕೋಶಕ್ಕೆ ಹೆಚ್ಚು ಹಾನಿಯುಂಟಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ತಿಳಿಸಿದೆ.
ಹಿಂದಿನ ಕೊರೊನಾ ರೂಪಾಂತರಗಳಿಗಿಂತ ಓಮೈಕ್ರಾನ್ ತೀವ್ರತೆ ಕಡಿಮೆ ಇದೆ. ಇದರಿಂದಾಗಿ ಶ್ವಾಸಕೋಶಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ಅಮೆರಿಕ ಮತ್ತು ಜಪಾನ್ ವಿಜ್ಞಾನಿಗಳ ಒಕ್ಕೂಟದಿಂದ ಇತ್ತೀಚೆಗೆ ಇಲಿಗಳ ಮೇಲೆ ಹೊಸ ಅಧ್ಯಯನ ನಡೆಸಲಾಗಿದ್ದು, ಓಮೈಕ್ರಾನ್ ಸೋಂಕಿನಿಂದ ಶ್ವಾಸಕೋಶಕ್ಕೆ ಹಾನಿಯಾಗುವ ಸಾಧ್ಯತೆ ಕಡಿಮೆ. ಜತೆಗೆ ಮರಣ ಪ್ರಮಾಣ ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ.
ಮನುಷ್ಯನ ಅಂಗಾಂಗಗಳ ಮೇಲೆ ಓಮೈಕ್ರಾನ್ ಸೋಂಕಿನಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ತಜ್ಞರು ಅಧ್ಯಯನ ಮಾಡಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ಸೋಂಕಿತರಿಗೆ ಹೋಲಿಸಿದರೆ ಶೇ 80ರಷ್ಟು ಓಮೈಕ್ರಾನ್ ಪೀಡಿತರು ಬೇಗ ಚೇತರಿಸಿಕೊಂಡಿದ್ದಾರೆ. ಅದೇ ರೀತಿ ಇಂಗ್ಲೆಂಡ್‌ನಲ್ಲಿಯೂ ಕೂಡ ಸೋಂಕಿನ ತೀವ್ರತೆ ಶೇ 70ರಷ್ಟು ಕಡಿಮೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.