ADVERTISEMENT

ಓಮೈಕ್ರಾನ್‌ ಕೇಂದ್ರಿತ ಬೂಸ್ಟರ್‌ ಲಸಿಕೆ ಬಿಡುಗಡೆ

ಪಿಟಿಐ
Published 24 ಜೂನ್ 2023, 23:30 IST
Last Updated 24 ಜೂನ್ 2023, 23:30 IST
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜೀತೇಂದ್ರ ಸಿಂಗ್‌ ಅವರು ಓಮೈಕ್ರಾನ್‌ ಕೇಂದ್ರಿತ ಕೋವಿಡ್‌ ಲಸಿಕೆ ‘ಜೆಮ್‌ಕೊವ್ಯಾಕ್‌–ಒಎಂ’ಅನ್ನು ದೆಹಲಿಯಲ್ಲಿ ಭಾನುವಾರ ಬಿಡುಗಡೆ ಮಾಡಿದರು    –ಪಿಟಿಐ ಚಿತ್ರ
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜೀತೇಂದ್ರ ಸಿಂಗ್‌ ಅವರು ಓಮೈಕ್ರಾನ್‌ ಕೇಂದ್ರಿತ ಕೋವಿಡ್‌ ಲಸಿಕೆ ‘ಜೆಮ್‌ಕೊವ್ಯಾಕ್‌–ಒಎಂ’ಅನ್ನು ದೆಹಲಿಯಲ್ಲಿ ಭಾನುವಾರ ಬಿಡುಗಡೆ ಮಾಡಿದರು    –ಪಿಟಿಐ ಚಿತ್ರ   

ನವದೆಹಲಿ: ಕೊರೊನ ವೈರಸ್‌ ಉಪತಳಿ ಓಮೈಕ್ರಾನ್‌ ಕೇಂದ್ರಿತವಾಗಿ ಅಭಿವೃದ್ಧಿಪಡಿಸಲಾಗಿರುವ ಎಂಆರ್‌ಎನ್‌ಎ ಆಧರಿತ ಕೋವಿಡ್‌ ಬೂಸ್ಟರ್‌ ಲಸಿಕೆ ‘ಜೆಮ್‌ಕೋವ್ಯಾಕ್‌–ಒಎಂ’ ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಶನಿವಾರ ಬಿಡುಗಡೆ ಮಾಡಿದರು.

ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಕಾರ ಮಂಡಳಿ (ಬಿಐಆರ್‌ಎಸಿ) ಸಹಕಾರದೊಂದಿದೆ ಜೆನ್ನೊವಾ ಸಂಸ್ಥೆಯು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ದೇಶೀಯ ತಂತ್ರಜ್ಞಾನ ಬಳಿಸಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಭಾರತೀಯ ಎಂಆರ್‌ಎನ್‌ಎ ಆಧರಿತ ಲಸಿಕೆ ಇದಾಗಿದೆ. 

ತುರ್ತು ಸಂದರ್ಭಗಳಲ್ಲಿ ಬಳಸಲು ಈ ಲಸಿಕೆಗೆ ಭಾರತೀಯ ಔಷದ ನಿಯಂತ್ರಣ ಮಹಾ ನಿರ್ದೇಶಕರ (ಡಿಸಿಜಿಐ) ಕಚೇರಿಯು ಕೆಲ ದಿನಗಳ ಹಿಂದಯಷ್ಟೇ ಅನುಮತಿ ನೀಡಿತ್ತು. 

ADVERTISEMENT

ಕೋವಿಡ್‌– 19 ಲಸಿಕೆಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಆತ್ಮನಿರ್ಭರ ಭಾರತ 3.0 ಪ್ಯಾಕೇಜ್ ಅಡಿ ಕೋವಿಡ್‌ ಸುರಕ್ಷಾ ಯೋಜನೆಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾದ ಐದನೇ ಲಸಿಕೆ ‘ಜೆಮ್‌ಕೋವ್ಯಾಕ್‌–ಒಎಂ’ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.