ADVERTISEMENT

ಜೂನ್ 1ರೊಳಗೆ ‘ಒಂದು ದೇಶ, ಒಂದು ಪಡಿತರ ಚೀಟಿ’ ಜಾರಿ: ರಾಮ್ ವಿಲಾಸ್ ಪಾಸ್ವಾನ್

ಏಜೆನ್ಸೀಸ್
Published 21 ಜನವರಿ 2020, 3:11 IST
Last Updated 21 ಜನವರಿ 2020, 3:11 IST
ರಾಮ್ ವಿಲಾಸ್ ಪಾಸ್ವಾನ್
ರಾಮ್ ವಿಲಾಸ್ ಪಾಸ್ವಾನ್   

ಪಾಟ್ನಾ: ‘ಒಂದು ದೇಶ, ಒಂದು ಪಡಿತರ ಚೀಟಿ’ ಯೋಜನೆಯನ್ನು ಜೂನ್ 1ರ ಒಳಗೆ ದೇಶದಾದ್ಯಂತ ಜಾರಿ ಮಾಡಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಘೋಷಿಸಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಒಂದೇ ಪಡಿತರ ಚೀಟಿ ಬಳಸಿ ದೇಶದ ಯಾವುದೇ ಭಾಗದಲ್ಲಿ ಫಲಾನುಭವಿಗಳು ಸೌಲಭ್ಯ ಪಡೆಯಬಹುದಾಗಿದೆ’ ಎಂದು ಹೇಳಿದರು.

ಕಳೆದ ಡಿಸೆಂಬರ್ 3ರಂದು ಈ ಕುರಿತು ಮಾಹಿತಿ ನೀಡಿದ್ದ ಪಾಸ್ವಾನ್, ಜೂನ್ 30ರ ಒಳಗೆ ‘ಒಂದು ದೇಶ, ಒಂದು ಪಡಿತರ ಚೀಟಿ’ಯೋಜನೆ ಜಾರಿಯಾಗಲಿದೆ ಎಂದಿದ್ದರು. ಅವರ ಹೊಸ ಹೇಳಿಕೆಯು ಯೋಜನೆಯು ಒಂದು ತಿಂಗಳು ಮೊದಲೇ ಅನುಷ್ಠಾನಕ್ಕೆ ಬರುವ ಮುನ್ಸೂಚನೆ ನೀಡಿದೆ.

ADVERTISEMENT

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.