ಜೈಪುರ: ಹಿಂದೂಗಳೆಂದರೆ ಉದಾರಿಗಳು ಮತ್ತು ಧಾರ್ಮಿಕ ನಂಬಿಕೆ, ಜಾತಿ ಮತ್ತು ಆಚರಣೆಗಳ ಹೊರತಾಗಿಯೂ ಅವರು ಪ್ರತಿಯೊಬ್ಬರಿಗೂ ಒಳಿತನ್ನು ಬಯಸುತ್ತಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾನುವಾರ ಹೇಳಿದರು.
ಹಿಂದೂ ಸಮಾಜವು ದೇಶದ ಜೀವಾಳ (ಕರ್ತಾ–ಧರ್ತಾ) ಎಂದು ಹೇಳಿದರು.
‘ದೇಶದಲ್ಲಿ ಏನಾದರೂ ತಪ್ಪು ನಡೆಯುತ್ತಿದ್ದರೆ, ಅದು ಹಿಂದೂ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ದೇಶದಲ್ಲಿ ಏನೇ ಒಳಿತಾದರೂ ಅದು ಹಿಂದೂ ಸಮಾಜಕ್ಕೆ ಹಿರಿಮೆ ತಂದುಕೊಡುತ್ತದೆ. ಏಕೆಂದರೆ ಹಿಂದೂ ಸಮಾಜವು ಈ ದೇಶದ ಕರ್ತಾ–ಧರ್ತಾ’ ಎಂದರು.
ಹಿಂದೂಗಳು ಉದಾರಿಗಳು, ಎಲ್ಲರಿಗೂ ಪ್ರೀತಿ ಹಂಚುತ್ತಾರೆ, ಎಲ್ಲರಿಗೂ ಒಳಿತು ಬಯಸುತ್ತಾರೆ. ಈ ಗುಣಗಳನ್ನು ಹೊಂದಿರುವವರನ್ನು ಅವರ ಆಚರಣೆ, ಭಾಷೆ, ಜಾತಿಯ ಹೊರತಾಗಿ ಹಿಂದೂ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಮೊದಲು ಸಂಘದ ಬಗ್ಗೆ ಬಹುತೇಕರಿಗೆ ತಿಳಿದಿರಲಿಲ್ಲ. ಆದರೆ ಈಗ ವ್ಯಾಪಕವಾಗಿ ಗುರುತಿಸಿಕೊಂಡಿದೆ ಮತ್ತು ಬಾಹ್ಯವಾಗಿ ವಿರೋಧಿಸುವವರೂ ಸಂಘಕ್ಕೆ ಗೌರವ ನೀಡುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.