ADVERTISEMENT

ಜಮ್ಮು–ಕಾಶ್ಮೀರ | 370ನೇ ವಿಧಿಯಡಿ ಸ್ಥಾನಮಾನ ರದ್ದು: ಓದಲೇಬೇಕಾದ 10 ಸುದ್ದಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2023, 8:14 IST
Last Updated 11 ಡಿಸೆಂಬರ್ 2023, 8:14 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಒಂದು ವರ್ಷ ಆಗಿದ್ದ ಸಂದರ್ಭದಲ್ಲಿ (2020 ಆಗಸ್ಟ್‌ 5) ಪ್ರಜಾವಾಣಿ ಜಾಲತಾಣದಲ್ಲಿ ಪ್ರಕಟವಾಗಿದ್ದ ಪ್ರಮುಖ ವಿಚಾರಗಳ ಕೊಂಡಿ ಇರುವ ಸುದ್ದಿ ಇದು. ಓದುಗರು ತಿಳಿದಿರಲೇಬೇಕಾದ ಮಾಹಿತಿಯ ಗುಚ್ಛವಿದು.

ಈ ರಾಜ್ಯವು ಸ್ವಾತಂತ್ರ್ಯಾನಂತರದಿಂದ ಅನುಭವಿಸಿಕೊಂಡು ಬಂದಿದ್ದ ವಿಶೇಷ ಅಧಿಕಾರ ಮತ್ತು ಸೌಲಭ್ಯಗಳನ್ನು ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿದೆ. ಲಡಾಕ್‌ನಲ್ಲಿ ವಿಧಾನಸಭೆ ಇರುವುದಿಲ್ಲ. ಇದು ಚಂಡೀಗಢ ಮಾದರಿಯ ಕೇಂದ್ರಾಡಳಿತ ಪ್ರದೇಶವಾಗಿರುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇರಲಿದೆ. ಇದು ದೆಹಲಿ ಮತ್ತು ಪುದುಚೇರಿ ಹೊಂದಿರುವಂತಹ ಸ್ಥಾನವನ್ನು ಪಡೆದಿದೆ.

ಕಾಶ್ಮೀರದ ಚರಿತ್ರೆ ಎಂದರೆ ‘ಭೂಸ್ವರ್ಗ’ವನ್ನು ‘ನರಕ’ ಮಾಡುತ್ತಲೇ ಹೋದ ಅವಕಾಶವಾದಿ ರಾಜಕಾರಣದ ಕತೆಯಾಗಿದೆ. ಭಾರತ ವಿಭಜನೆಯ ಕಾಲದಿಂದ, 370ನೇ ವಿಧಿ ರದ್ದುಗೊಳಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡ ಕಾಲಘಟ್ಟದವರೆಗಿನ ಸಮಗ್ರ ಮಾಹಿತಿಯ ಸಂಕಲನವಿದು. ಜಮ್ಮು ಮತ್ತು ಕಾಶ್ಮೀರ ಕುರಿತು ಓದಲೇಬೇಕಾದ 10 ಸುದ್ದಿಗಳು ಇಲ್ಲಿವೆ...

ADVERTISEMENT

1) ಕಾಶ್ಮೀರ ಕಣಿವೆ; ಚೆಲ್ಲು ಚೆದುರಾದ ಚಿತ್ತಾರ
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ–ಪಾಕಿಸ್ತಾನದ ನಡುವಣ ಸಂಘರ್ಷವು 1947ರಷ್ಟು ಹಿಂದೆಯೇ ಆರಂಭವಾಗಿತ್ತು. ಸ್ವಾತಂತ್ರ್ಯದ ಹೊತ್ತಿಗೆ ದೇಶದಲ್ಲಿ 500ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಭಾರತದೊಂದಿಗೆ ವಿಲೀನವಾಗಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಮುಕ್ತ ಅವಕಾಶವನ್ನು ಈ ಸಂಸ್ಥಾನಗಳಿಗೆ ಭಾರತ ಸರ್ಕಾರವು ನೀಡಿತ್ತು. ಈ ಕುರಿತ ಸಮಗ್ರ ಮಾಹಿತಿಯ ಬರಹ ಇದು.

2) ಸಂವಿಧಾನದ 370ನೇ ಕಲಂ ಪ್ರಸ್ತುತತೆ
ಜಮ್ಮು– ಕಾಶ್ಮೀರ ವಿವಾದವನ್ನು ಸಮಗ್ರತೆ, ಸಂವಿಧಾನದ ಚೌಕಟ್ಟು, ಕಾನೂನು, ರಾಜ­ಕೀಯ ನೆಲೆಯಲ್ಲಿ ನೋಡಿರುವ ಬರಹವಿದು. 370ನೇ ಕಲಂ ಪ್ರಸ್ತುತತೆ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.

3) ಕಾಶ್ಮೀರ: ಇನ್ನಿಲ್ಲ ವಿಶೇಷಾಧಿಕಾರ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಮಹತ್ವದ ಮತ್ತು ಐತಿಹಾಸಿಕವಾದ ನಿರ್ಧಾರವನ್ನು ಕೈಗೊಂಡಿದ್ದರ ಸಮಗ್ರ ಮಾಹಿತಿ ಇದರಲ್ಲಿದೆ.

4) ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಸಮಗ್ರ ಮಾಹಿತಿ
ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಏನು ಹೇಳುತ್ತದೆ ಎಂಬುದನ್ನು ಈ ಲೇಖನಸಮಗ್ರವಾಗಿ ಕಟ್ಟಿಕೊಟ್ಟಿದೆ. ಆ ವಿಧಿಗಳ ಅಧಿಕಾರ ಮತ್ತು ವ್ಯಾಪ್ತಿಯ ಅಳವನ್ನು ಇಲ್ಲಿ ಓದಬಹುದು.

5) ಜಮ್ಮು ಕಾಶ್ಮೀರ ಎರಡು ಭಾಗವಾಯಿತು: ಏನು ಇದರ ಅರ್ಥ?
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸಿ, ಕಣಿವೆ ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸುವ ಪ್ರಸ್ತಾವನೆಯ ಮಾಹಿತಿ ಈ ಸುದ್ದಿಯಲ್ಲಿದೆ.

6) ‘ದೊಡ್ಡ ತೀರ್ಮಾನ’ದ ಹಿಂದಿನ ಆರು ಮಂದಿ
ಸಂವಿಧಾನದ 370ನೇ ವಿಧಿಯನ್ನು ಅಸಿಂಧುಗೊಳಿಸುವ ಮತ್ತು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ‘ದೊಡ್ಡ ತೀರ್ಮಾನ’ದ ಹಿಂದೆ ಕೇಂದ್ರದ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿರುವ ಆರು ಮಂದಿಯ ಚಿಂತನೆ ಹಾಗೂ ಶ್ರಮ ಇದೆ.

7) ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮಗಳೇನು?
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರದ ಪರಿಣಾಮಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

8) ನವ ಉದಾರವಾದ: ಮುಕ್ತ ಕಾಶ್ಮೀರ
ವಿಧಿ 370 ಮೂಲತಃ ಕಾಶ್ಮೀರದ ಸ್ವಾಯತ್ತೆಗೆ ಸಂಬಂಧಿಸಿದವಿಚಾರ. ಅಲ್ಲಿನ ಜನರ ಬದುಕಿಗೆ ಹತ್ತಿರವಾದ ಪ್ರಶ್ನೆಯೂ ಹೌದು. ವಿಧಿ 35ಎ ಶಾಶ್ವತ ನಿವಾಸಿಗಳ ಹಕ್ಕುಗಳನ್ನು ನಿರ್ಧರಿಸುತ್ತಿತ್ತು ಎಂಬ ನವ ಉದಾರವಾದ ಕುರಿತ ಲೇಖನ ಇದು.

9) ಕಾಶ್ಮೀರ ಇನ್ನುಮುಂದೆ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶ
ಕಣಿವೆ ರಾಜ್ಯ ಕಾಶ್ಮೀರವನ್ನು ವಿಭಾಗಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ, ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗಿದ್ದು, ಇವುಗಳ ಪೈಕಿ ವಿಸ್ತೀರ್ಣದ ವಿಚಾರದಲ್ಲಿ ಕಾಶ್ಮೀರ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶ ಎನಿಸಿಕೊಳ್ಳಲಿದೆ. ಇದರ ಬಳಿಕ ಲಡಾಕ್ ಇರಲಿದೆ.

10) ‘ಭೂಸ್ವರ್ಗ– ಭೂನರಕ’ದ ನಡುವೆ | ದಿನೇಶ್‌ ಅಮಿನ್ ಮಟ್ಟು ಬರಹ
ಕಾಶ್ಮೀರದ ಚರಿತ್ರೆ ಎಂದರೆ ‘ಭೂಸ್ವರ್ಗ’ವನ್ನು ‘ನರಕ’ ಮಾಡುತ್ತಲೇ ಹೋದ ಅವಕಾಶವಾದಿ ರಾಜಕಾರಣದ ಕತೆ. ಇದಕ್ಕೆ ಭಾರತ ಮತ್ತು ಪಾಕಿಸ್ತಾನವನ್ನು ಆಳಿದವರೆಲ್ಲರ ಕಾಣಿಕೆಯೂ ಇದೆ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಅವರ ಬರೆದ ಲೇಖನವಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.