ADVERTISEMENT

ಈರುಳ್ಳಿ ರಫ್ತು ನಿಷೇಧ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:10 IST
Last Updated 8 ಡಿಸೆಂಬರ್ 2023, 16:10 IST
.
.   

ಮುಂಬೈ (ಪಿಟಿಐ): ಕೇಂದ್ರ ಸರ್ಕಾರವು ಈರುಳ್ಳಿ ರಫ್ತನ್ನು ನಿಷೇಧಿಸಿರುವುದನ್ನು ವಿರೋಧಿಸಿ ನಾಸಿಕ್‌ ಜಿಲ್ಲೆಯ ಮಹಾರಾಷ್ಟ್ರ– ಆಗ್ರಾ ಹೆದ್ದಾರಿಯ ಮೂರು ಸ್ಥಳಗಳಲ್ಲಿ ನೂರಾರು ರೈತರು ಶುಕ್ರವಾರ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

‘ನಾಸಿಕ್‌ ಜಿಲ್ಲೆಯ ಲಾಸಲ್‌ಗಾಂವ್‌, ನಂದಗಾಂವ್‌, ಪಿಂಪಲ್‌ಗಾಂವ್‌ ಹಾಗೂ ಉಮರಾನೆಯ ಈರುಳ್ಳಿ ಮಾರುಕಟ್ಟೆಗಳಲ್ಲಿ ಕಳೆದ 4–5 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

‘ಮಹಾರಾಷ್ಟ್ರ– ಆಗ್ರಾ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ಗಳ ಮೂಲಕ ರೈತರು ರಸ್ತೆ ತಡೆ ನಡೆಸಿದ್ದಾರೆ. ಜೈಖೇಡಾ, ಚಂದ್ವಾಡ್‌, ಮುಂಗ್ಸೆ ಹಾಗೂ ಮಾಲೆಗಾಂವ್‌ನಲ್ಲೂ ರಸ್ತೆ ತಡೆ ನಡೆದಿವೆ’ ಎಂದರು.

ADVERTISEMENT

‘ನಾಸಿಕ್‌ ಪೊಲೀಸರ ಮನವಿ ಮೇರೆಗೆ ರೈತರು ತಮ್ಮ ಪ್ರತಿಭಟನೆ ನಿಲ್ಲಿಸಿ, ಶಾಂತಿಯುತವಾಗಿ ಚದುರಿದ್ದಾರೆ. ಅವರ ಮೇಲೆ ಯಾವುದೇ ರೀತಿಯ ಬಲಪ್ರಯೋಗ ಮಾಡಿಲ್ಲ’ ಎಂದೂ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.