ನವದೆಹಲಿ: ‘ವಿದೇಶಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಎಡುಟೆಕ್ ಕಂಪನಿಗಳು ನಡೆಸುವ ಆನ್‌ಲೈನ್ ಪಿಎಚ್.ಡಿ ಕೋರ್ಸುಗಳು ಯಾವುದೇ ಮಾನ್ಯತೆ ಹೊಂದಿರುವುದಿಲ್ಲ’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಯು) ಶುಕ್ರವಾರ ಹೇಳಿದೆ.
ಈ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಯುಜಿಸಿ ಮತ್ತು ಎಐಸಿಟಿಯು ಎರಡನೇ ಬಾರಿಗೆ ಈ ರೀತಿಯ ಎಚ್ಚರಿಕೆ ನೀಡಿವೆ.
ಈ ವರ್ಷದ ಆರಂಭದಲ್ಲಿ, ಯುಜಿಸಿ ಮತ್ತು ಎಐಸಿಟಿಇ ತಮ್ಮ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳಿಗೆ ಎಡುಟೆಕ್ ಕಂಪನಿಗಳ ಸಹಯೋಗದೊಂದಿಗೆ ದೂರಶಿಕ್ಷಣ ಮತ್ತು ಆನ್‌ಲೈನ್ ಮೂಲಕ ನಡೆಸುವ ಕೋರ್ಸ್‌ಗಳ ಬಗ್ಗೆ ಎಚ್ಚರಿಕೆ ನೀಡಿದ್ದವು. ನಿಯಮಗಳ ಪ್ರಕಾರ ಯಾವುದೇ ‘ಫ್ರಾಂಚೈಸ್’ ಒಪ್ಪಂದಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದೂ ತಿಳಿಸಿದ್ದವು.
‘ಪಿಎಚ್.ಡಿ ಪದವಿಗಳನ್ನು ನೀಡುವ ಮಾನದಂಡಗಳನ್ನು ನಿರ್ವಹಿಸುವ ಸಲುವಾಗಿಯೇ ಯುಜಿಸಿ ನಿಯಮಾವಳಿ– 2016 ಅನ್ನು ರೂಪಿಸಲಾಗಿದೆ. ಯುಜಿಸಿ ಮತ್ತು ಎಐಸಿಟಿಇ ಹೊರಡಿಸಿರುವ ಜಂಟಿ ಆದೇಶ ಪ್ರಕಾರ, ಪಿಎಚ್.ಡಿ ಪದವಿಗಳನ್ನು ನೀಡಲು ಯುಜಿಸಿಯ ಈ ನಿಯಮಗಳು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.