ADVERTISEMENT

ವಿಕಿ‍ಪೀಡಿಯಾದಂತಹ ಆನ್‌ಲೈನ್‌ ಮೂಲಗಳು ವಿಶ್ವಾಸಾರ್ಹವಲ್ಲ: ಸುಪ್ರೀಂ ಕೋರ್ಟ್

ಪಿಟಿಐ
Published 18 ಜನವರಿ 2023, 11:18 IST
Last Updated 18 ಜನವರಿ 2023, 11:18 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ‘ವಿಕಿಪೀಡಿಯಾದಂತಹ ಆನ್‌ಲೈನ್‌ ಮಾಹಿತಿ ಮೂಲಗಳು ಜನ ಸಮೂಹ ಒದಗಿಸುವ ಮಾಹಿತಿಯನ್ನು ಆಧರಿಸಿರುತ್ತವೆ. ತಮಗೆ ಗೊತ್ತಿರುವ ವಿಚಾರಗಳನ್ನು ಸೇರ್ಪಡೆ ಮಾಡುವ ಅವಕಾಶವನ್ನೂ ಅವು ಬಳಕೆದಾರರಿಗೆ ಒದಗಿಸುತ್ತವೆ. ಹೀಗಾಗಿ ಅವುಗಳನ್ನು ಸಂಪೂರ್ಣವಾಗಿ ಅವಲಂಬಿಸುವಂತಿಲ್ಲ. ಅವು ದಾರಿ ತಪ್ಪಿಸುವಂತಹ ಮಾಹಿತಿ ಪಸರಿಸುವ ಸಾಧ್ಯತೆಯೂ ಇದೆ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ.

ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ವಿಕ್ರಂನಾಥ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, ‘ವಿಕಿಪೀಡಿಯಾದಂತಹ ಮಾಹಿತಿ ಮೂಲಗಳು ಉಚಿತವಾಗಿ ಜ್ಞಾನ ಒದಗಿಸುತ್ತವೆ ಎಂಬುದನ್ನು ನಾವು ಒ‍ಪ್ಪುತ್ತೇವೆ. ಆದರೆ ಕಾನೂನು ವಿವಾದಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಇಂತಹ ಮೂಲಗಳನ್ನು ಅವಲಂಬಿಸುವಾಗ ಎಚ್ಚರದಿಂದ ಇರಬೇಕು’ ಎಂದು ನ್ಯಾಯಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT