ADVERTISEMENT

ವಿರೋಧ ಪಕ್ಷಗಳು ಪ್ರಧಾನಿಯನ್ನು ಟೀಕಿಸಲು ಕಲಾಪವನ್ನು ಬಳಸಿಕೊಳ್ಳುತ್ತಿವೆ: ರಿಜಿಜು

ಪಿಟಿಐ
Published 25 ಜುಲೈ 2024, 5:44 IST
Last Updated 25 ಜುಲೈ 2024, 5:44 IST
<div class="paragraphs"><p>ಕಿರಣ್ ರಿಜಿಜು</p></div>

ಕಿರಣ್ ರಿಜಿಜು

   

– ಪಿಟಿಐ ಚಿತ್ರ

ನವದೆಹಲಿ: ವಿರೋಧ ಪಕ್ಷಗಳು ಬಜೆಟ್‌ನ ಅಂಶಗಳ ಬಗ್ಗೆ ಮಾತನಾಡುವುದಕ್ಕಿಂತಲೂ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಲು ಕಲಾಪವನ್ನು ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ADVERTISEMENT

ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕರು ಮಾಡುವ ಭಾಷಣಗಳು ಸದನವನ್ನು ಅವಮಾನಿಸುವಂತೆ ಹಾಗೂ ಬಜೆಟ್ ಅಧಿವೇಶನದ ಗೌರವಕ್ಕೆ ಚ್ಯುತಿ ತರುವಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಜನಾದೇಶದವನ್ನು ಗೌರವಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ ಸತತ ಮೂರನೇ ಬಾರಿಗೆ ಜನಾದೇಶ ನೀಡಿದ್ದಾರೆ. ಯಾರಾದರೂ ಜನರ ತೀರ್ಪನ್ನು ಅವಮಾನಿಸಲು ಪ್ರಯತ್ನಿಸುವುದೇ ಆದರೆ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಯುತ್ತಾರೆ’ ಎಂದು ಹೇಳಿದ್ದಾರೆ.

‘ಚುನಾವಣೆಗಳು ಈಗ ಮುಗಿದಿವೆ. ಈಗ ನಮ್ಮ ಗುರಿ ವಿಕಸಿತ ಭಾರತವಾಗಿರಬೇಕು. ಕೇಂದ್ರ ಬಜೆಟ್‌ನ ಬಗ್ಗೆ ರಚನಾತ್ಮಕ ಚರ್ಚೆ ನಡೆಯಬೇಕು’ ಎಂದು ರಿಜಿಜು ಹೇಳಿದ್ದಾರೆ.

‘ವಿರೋಧ ಪಕ್ಷಗಳು ಬಜೆಟ್‌ನ ಬಗ್ಗೆ ಯಾವ ಮಾತುಗಳನ್ನೂ ಆಡಿಲ್ಲ. ಅವರು ಚರ್ಚೆ ವೇಳೆ ರಾಜಕೀಯ ಮಾಡಿದರು. ಜನಾದೇಶವನ್ನು ಅವಮಾನಿಸಿದರು. ಪ್ರಧಾನಮಂತ್ರಿಯನ್ನು ನಿಂದಿಸಿದರು’ ಎಂದು ಅವರು ನುಡಿದಿದ್ದಾರೆ.

ಸದನದಲ್ಲಿ ಗಲಾಟೆ ಮಾಡಬಾರದು ಎಂದು ಪಕ್ಷಗಳ ನಾಯಕರು ತಮ್ಮ ಸದಸ್ಯರಿಗೆ ನಿರ್ದೇಶನ ನೀಡಬೇಕು. ಬಜೆಟ್ ಅಧಿವೇಶನದಲ್ಲಿ ನಾಗರಿಕ ಹಾಗೂ ಸೂಕ್ಷ್ಮ ಚರ್ಚೆಗಳು ನಡೆಯಬೇಕು ಎಂದು ಹೇಳಿದ್ದಾರೆ.

ಬಜೆಟ್‌ನಲ್ಲಿ ರಾಜ್ಯಗಳ ಕಡೆಗಣನೆ ಖಂಡಿಸಿ, ವಿರೋಧ ಪಕ್ಷಗಳು ಬುಧವಾರ ಪ್ರತಿಭಟನೆ ನಡೆಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.