ADVERTISEMENT

ವರದಿ ತಿರುಚಿದ ಆರೋಪ: ವಕ್ಫ್ ಸಮಿತಿ ಸಭೆಯಿಂದ ಹೊರನಡೆದ ವಿಪಕ್ಷಗಳ ಸದಸ್ಯರು

ಪಿಟಿಐ
Published 28 ಅಕ್ಟೋಬರ್ 2024, 7:38 IST
Last Updated 28 ಅಕ್ಟೋಬರ್ 2024, 7:38 IST
<div class="paragraphs"><p>ವಕ್ಫ್ ಬೋರ್ಡ್ (ಸಾಂದರ್ಭಿಕ ಚಿತ್ರ)</p></div>

ವಕ್ಫ್ ಬೋರ್ಡ್ (ಸಾಂದರ್ಭಿಕ ಚಿತ್ರ)

   

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ ಸಂಬಂಧ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿ ಸೋಮವಾರ ಸೇರಿದ್ದ ಸಭೆಯಿಂದ ವಿರೋಧ ಪಕ್ಷಗಳ ಹಲವು ಸದಸ್ಯರು ಹೊರನಡೆದಿದ್ದಾರೆ.

ದೆಹಲಿ ವಕ್ಫ್ ಬೋರ್ಡ್‌ನ ವಿಷಯ ಮಂಡನೆ ವಿರೋಧಿಸಿ ವಿರೋಧ ಪಕ್ಷಗಳ ಸದಸ್ಯರು ಹೊರನಡೆದಿದ್ದಾರೆ.

ADVERTISEMENT

ಸಮಿತಿಯ ಮುಂದೆ ಹಾಜರಾದ ದೆಹಲಿ ವಕ್ಫ್ ಬೋರ್ಡ್‌ನ ಆಡಳಿತಾಧಿಕಾರಿ, ತಮ್ಮ ವಿಷಯ ಮಂಡನೆಯಲ್ಲಿ ದೆಹಲಿ ಸರ್ಕಾರದ ಗಮನಕ್ಕೆ ಬಾರದೆ ಬದಲಾವಣೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಎಎಪಿ ಸದಸ್ಯ ಸಂಜಯ್ ಸಿಂಗ್‌, ಡಿಎಂಕೆಯ ಮೊಹಮ್ಮದ್ ಅಬ್ದುಲ್ಲಾ, ಕಾಂಗ್ರೆಸ್‌ನ ನಾಸಿರ್ ಹುಸೇನ್‌ ಹಾಗೂ ಮೊಹಮ್ಮದ್ ಜಾವೇದ್‌ ಸಭೆಯಿಂದ ಹೊರನಡೆದಿದ್ದಾರೆ.

ಮುಖ್ಯಮಂತ್ರಿಗಳ ಅನುಮತಿ ಇಲ್ಲದೆ ಎಂ.ಸಿ.ಡಿ ಆಯಕ್ತ ಹಾಗೂ ವಕ್ಫ್ ಆಡಳಿತಾಧಿಕಾರಿ ಮೂಲ ವರದಿಯನ್ನು ತಿರುಚಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.