ಶಿಮ್ಲಾ: ವಿವಾದಿತ ಮಸೀದಿಯ ಮೂರು ಮಹಡಿಗಳನ್ನು ಉರುಳಿಸಬೇಕು ಎಂದು ಮುನಿಸಿಪಲ್ ಆಯುಕ್ತರ ನ್ಯಾಯಾಲಯ ನೀಡಿರುವ ಆದೇಶದ ಪ್ರತಿಯು ಸಿಕ್ಕಿದೆ, ಇದನ್ನು ವಕ್ಫ್ ಮಂಡಳಿಗೆ ತಿಳಿಸಲಾಗಿದೆ ಎಂದು ಸಂಜೌಲಿ ಮಸೀದಿ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಲತೀಫ್ ಅವರು ಬುಧವಾರ ತಿಳಿಸಿದ್ದಾರೆ.
ವಿವಾದಕ್ಕೆ ಗುರಿಯಾಗಿರುವ ಐದು ಮಹಡಿಗಳ ಸಂಜೌಲಿ ಮಸೀದಿಯ ಮೂರು ಮಹಡಿಗಳನ್ನು ಕೆಡವಬೇಕು ಎಂದು ನ್ಯಾಯಾಲಯವು ಅಕ್ಟೋಬರ್ 5ರಂದು ಆದೇಶಿಸಿದೆ. ಆದೇಶವನ್ನು ಕಾರ್ಯರೂಪಕ್ಕೆ ತರಲು ವಕ್ಫ್ ಮಂಡಳಿ ಮತ್ತು ಮಸೀದಿ ಸಮಿತಿಯ ಅಧ್ಯಕ್ಷರಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ.
‘ವಕ್ಫ್ ಮಂಡಳಿಯಿಂದ ಅನುಮತಿ ದೊರೆತ ತಕ್ಷಣ ಕೆಲಸ ಆರಂಭಿಸಲಾಗುತ್ತದೆ. ಅನುಮತಿ ಇಲ್ಲದ ಎರಡು ಮಹಡಿಗಳನ್ನು ಉರುಳಿಸಲಾಗುತ್ತದೆ ಎಂದು ನಾವೇ ಹೇಳಿದ್ದೆವು. ವಕ್ಫ‌್ ಮಂಡಳಿಯಿಂದ ಅನುಮತಿ ಪಡೆದು ಈ ವಿಚಾರವಾಗಿ ನ್ಯಾಯಾಲಯಕ್ಕೆ ವಿವರ ಸಲ್ಲಿಸಿದ್ದೆವು’ ಎಂದು ಲತೀಫ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.