ಮುಂಬೈ: ಕೋವಿಡ್ ಹಸಿರು ವಲಯಗಳಲ್ಲಿ ಚಿನ್ನಾಭರಣ ವಹಿವಾಟಿಗೆ ಚಾಲನೆ ಸಿಕ್ಕಿದೆ.
‘ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದು ಚಿನ್ನಾಭರಣ ವರ್ತಕರು ಒಂದು ವಾರದಿಂದ ವಹಿವಾಟು ನಡೆಸಲು ಆರಂಭಿಸಿದ್ದಾರೆ’ ಎಂದು ಹರಳು ಮತ್ತು ಚಿನ್ನಾಭರಣ ಸಮಿತಿಯ ಅಧ್ಯಕ್ಷ ಅನಂತ ಪದ್ಮನಾಭನ್ ತಿಳಿಸಿದ್ದಾರೆ.
ರಿಟೇಲ್ ವರ್ತಕರು ಶೇ 20–25ರಷ್ಟು ವಹಿವಾಟು ನಡೆಸುತ್ತಿದ್ದಾರೆ. ಮದುವೆ ಸಮಾರಂಭಕ್ಕೆ ಬೇಕಾದ ಆಭರಣಗಳನ್ನು ಖರೀದಿಸಲು ಗ್ರಾಹಕರು ಮಳಿಗೆಗಳಿಗೆ ಬರುತ್ತಿದ್ದಾರೆ. ಅಕ್ಷಯ ತೃತೀಯ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಖರೀದಿಸಿದ್ದವರು ಆಭರಣ ಪಡೆದುಕೊಳ್ಳಲು ಮಳಿಗೆಗಳಿಗೆ ಬರುತ್ತಿದ್ದಾರೆ. ಸದ್ಯಕ್ಕೆ, ಚಿನ್ನದ ದರ 10ಗ್ರಾಂಗೆ ₹ 45 ಸಾವಿರದ ಆಸುಪಾಸಿನಲ್ಲಿ ಇದೆ. ಮೇ 18ರ ನಂತರ ಪರಿಸ್ಥಿತಿ ಹೇಗಿರಲಿದೆ ಹಾಗೂ ಸರ್ಕಾರ ಯಾವೆಲ್ಲಾ ನಿರ್ಧಾರಗಳನ್ನು ತೆಗೆದು
ಕೊಳ್ಳಲಿದೆ ಎನ್ನುವುದರ ಬಗ್ಗೆ ಚಿನ್ನಾಭರಣ ವರ್ತಕರು ಕುತೂಹಲ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.