ನವದೆಹಲಿ: ಭಾರತದಲ್ಲಿ ಟ್ವಿಟರ್‌ಅನ್ನು ಮುಚ್ಚಿಸುವ ಬೆದರಿಕೆ ಹಾಕಲಾಗಿತ್ತು ಎಂದು ಟ್ವಿಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸಿ ಅವರು ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
‘ಕೆಲವು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಬೇಕೆಂಬ ಸೂಚನೆ ಇತ್ತು. ಅದನ್ನು ಪಾಲಿಸದೇ ಹೋದಲ್ಲಿ ನಿರ್ಬಂಧ ವಿಧಿಸುವ ಬೇದರಿಕೆಗಳು ಭಾರತ, ನೈಜೀರಿಯಾ ಮತ್ತು ಟರ್ಕಿಯಲ್ಲಿ ಎದುರಾಗಿದ್ದವು. ಭಾರತವು ಪತ್ರಕರ್ತರು ಮತ್ತು ಹೋರಾಟಗಾರರ ಸಾಮಾಜಿಕ ಮಾಧ್ಯಮ ಬಳಕೆಯನ್ನು ತಡೆಯಲು ಬಯಸುತ್ತದೆ’ ಎಂದು ಡಾರ್ಸಿ ಯುಟ್ಯೂಬ್ ಸುದ್ದಿ ಸಂಸ್ಥೆ ‘ಬ್ರೇಕಿಂಗ್’ಗೆ ನೀಡಿದ ಸಂದರ್ಶನದಲ್ಲಿ ಸೋಮವಾರ ಹೇಳಿದ್ದರು.
ಭಾರತೀಯ ಕಾನೂನನುಗಳನ್ನು ಟ್ವಿಟರ್ ಪದೇ ಪದೇ ಉಲ್ಲಂಘಿಸಿದೆ. 2022ರ ಜೂನ್‌ನಿಂದ ಭಾರತೀಯ ಕಾನೂನುಗಳನ್ನು ಅನುಸರಿಸಲು ಪ್ರಾರಂಭಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮಂಗಳವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.