ADVERTISEMENT

ಇಶಾ ಫೌಂಡೇಶನ್‌ನ ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು IAS, IPS ಅಧಿಕಾರಿಗಳು ಭಾಗಿ

ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್‌ ವತಿಯಿಂದ ಈಚೆಗೆ ನಡೆದ ಇನ್ನರ್ ಎಂಜಿನಿಯರಿಂಗ್ ಲೀಡರ್‌ಶಿಪ್ ಕಾರ್ಯಾಗಾರ

ಪಿಟಿಐ
Published 3 ಫೆಬ್ರುವರಿ 2024, 12:59 IST
Last Updated 3 ಫೆಬ್ರುವರಿ 2024, 12:59 IST
<div class="paragraphs"><p>ಸದ್ಗುರು ಜಗ್ಗಿ ವಾಸುದೇವ್</p></div>

ಸದ್ಗುರು ಜಗ್ಗಿ ವಾಸುದೇವ್

   

ನವದೆಹಲಿ: ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್‌ ವತಿಯಿಂದ ಈಚೆಗೆ ನಡೆದ ಇನ್ನರ್ ಎಂಜಿನಿಯರಿಂಗ್ ಲೀಡರ್‌ಶಿಪ್ ಕಾರ್ಯಾಗಾರದಲ್ಲಿ ಕೇಂದ್ರದ ನೂರಕ್ಕೂ ಹೆಚ್ಚು ನಾಗರಿಕ ಸೇವೆಯ ಅಧಿಕಾರಿಗಳು ಪಾಲ್ಗೊಂಡು ಕಾರ್ಯಾಗಾರದ ಸದುಪಯೋಗ ಪಡೆದಿದ್ದಾರೆ.

ಇಶಾ ಫೌಂಡೇಶನ್‌ ಹಾಗೂ ಕೇಂದ್ರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವತಿಯಿಂದ ಜನವರಿ 29ರಿಂದ ಫೆಬ್ರುವರಿ 2ವರೆಗೆ ಕಾರ್ಯಾಗಾರ ಕೊಯಮತ್ತೂರಿನಲ್ಲಿ ನಡೆಯಿತು.

ADVERTISEMENT

ನೂರಕ್ಕೂ ಹೆಚ್ಚು ಐಎಎಸ್, ಐಪಿಎಸ್, ಐಆರ್‌ಎಸ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

‘ಅಧಿಕಾರಿಗಳು ಈ ಕಾರ್ಯಗಾರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಇದರಿಂದ ಅವರ ವೃತ್ತಿ, ವೈಯಕ್ತಿಕ ಜೀವನದಲ್ಲಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಹಾಯವಾಗಲಿದೆ ಎನ್ನುವ ವಿಶ್ವಾಸ ನಮ್ಮದು’ ಎಂದು ಇಶಾ ಫೌಂಡೇಶನ್‌ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿದೆ.

‘ಇತ್ತೀಚಿನ ವರ್ಷಗಳಲ್ಲಿ 800 ಕ್ಕೂ ಹೆಚ್ಚು ಕೇಂದ್ರ ನಾಗರಿಕ ಸೇವೆ ಅಧಿಕಾರಿಗಳನ್ನು ಇನ್ನರ್ ಎಂಜಿನಿಯರಿಂಗ್ ಲೀಡರ್‌ಶಿಫ್‌ನ ಅಡಿ ತರಬೇತುಗೊಳಿಸಲಾಗಿದೆ ಎಂದು ಫೌಂಡೇಶನ್‌ ಹೇಳಿದೆ. ಅಲ್ಲದೇ ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅನೇಕ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.