ADVERTISEMENT

ಕಬ್ಬು ಕಟಾವು ಋತು: ಮಹಾರಾಷ್ಟ್ರದಲ್ಲಿ ಮತದಾನದಿಂದ 12 ಲಕ್ಷ ಮಂದಿ ವಂಚಿತ?

ಪಿಟಿಐ
Published 15 ನವೆಂಬರ್ 2024, 7:44 IST
Last Updated 15 ನವೆಂಬರ್ 2024, 7:44 IST
<div class="paragraphs"><p>ಕಬ್ಬು ಕಟಾವು (ಸಾಂದರ್ಭಿಕ ಚಿತ್ರ)</p></div>

ಕಬ್ಬು ಕಟಾವು (ಸಾಂದರ್ಭಿಕ ಚಿತ್ರ)

   

– ಪ್ರಜಾವಾಣಿ ಚಿತ್ರ

ಪುಣೆ: ನವೆಂಬರ್ 20 ರಂದು ನಡೆಯುವ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯಲ್ಲಿ ಮರಾಠವಾಡ, ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭ ಭಾಗದ ಸುಮಾರು 12 ಲಕ್ಷ ಮಂದಿ ಕಬ್ಬು ಕಟಾವು ಕಾರ್ಮಿಕರು ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ.

ADVERTISEMENT

ನವೆಂಬರ್ 15 ರಿಂದ ಕಬ್ಬು ಕಟಾವು ಋತು ಆರಂಭವಾಗಲಿದ್ದು, ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಕಬ್ಬು ಕಟಾವು ಮಾಡುವ ಕಾರ್ಮಿಕರು ‍ಪಶ್ಚಿಮ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ಮಹಾರಾಷ್ಟ್ರ ಕಬ್ಬು ಕಟಾವುಗಾರರ ಹಾಗೂ ಸಾಗಣೆದಾರರ ಅಸೋಶಿಯೇಷನ್ ಹೇಳಿದೆ.

ಕಬ್ಬು ಕಟಾವು ಕಾರ್ಮಿಕರು ಮತದಾನ ಮಾಡುವ ತಮ್ಮ ಹಕ್ಕಿನಿಂದ ವಂಚಿತರಾಗದಂತೆ, ಚುನಾವಣೆಯನ್ನು ಮುಂದೂಡಬೇಕು ಎಂದು ಕೋರಿ ಅಸೋಶಿಯೇಷನ್ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠಕ್ಕೆ ಮನವಿ ಮಾಡಿದೆ.

ಆದರೆ ಕಾರ್ಮಿಕರು ತಮ್ಮ ಹಕ್ಕು ಚಲಾಯಿಸಲು ಅವರ ಸ್ಥಳಕ್ಕೆ ಮರಳಿ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಪಶ್ಚಿಮ ಭಾರತ ಕಬ್ಬು ಮಿಲ್ ಅಸೋಶಿಯೇಷನ್ ತಿಳಿಸಿದೆ.

ಮರಾಠವಾಡ, ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭ ಭಾಗದ ಕಬ್ಬು ಕಟಾವು ಮಾಡುವ 12–15 ಲಕ್ಷ ಕಾರ್ಮಿಕರು ಪಶ್ಚಿಮ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿಗೆ ವಲಸೆ ಹೋಗಿದ್ದಾರೆ. ಕಟಾವು ಋತು ಆರಂಭವಾಗಿದ್ದು, ಈಗಾಗಲೇ ಗಣನೀಯ ಸಂಖ್ಯೆಯ ಕಬ್ಬು ಕಟಾವು ಕಾರ್ಮಿಕರು ಕೆಲಸಕ್ಕಾಗಿ ತಮ್ಮ ಮನೆಗಳನ್ನು ಬಿಟ್ಟು ಇತರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಏಪ್ರಿಲ್ ಅಥವಾ ಮೇ 2025ರವರೆಗೆ ಅವರು ಹಿಂತಿರುಗುವುದಿಲ್ಲ’ ಎಂದು ಮಹಾರಾಷ್ಟ್ರ ಕಬ್ಬು ಕಟಾವುಗಾರರ ಹಾಗೂ ಸಾಗಣೆದಾರರ ಅಸೋಶಿಯೇಷನ್‌ನ ಅಧ್ಯಕ್ಷ ಎಂದು ಜೀವನ್ ರಾಠೋಡ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.