ADVERTISEMENT

ಪಿಎಂಒ ಕುಂದುಕೊರತೆ ಪೋರ್ಟಲ್‌ನಲ್ಲಿ ದಾಖಲಾದ 12,000ಕ್ಕೂ ದೂರು ಬಾಕಿ: ಕೇಂದ್ರ

ಪಿಟಿಐ
Published 24 ಜುಲೈ 2024, 10:39 IST
Last Updated 24 ಜುಲೈ 2024, 10:39 IST
<div class="paragraphs"><p>ಲೋಕಸಭೆ</p></div>

ಲೋಕಸಭೆ

   

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ರಾಜ್ಯಗಳ ಕುರಿತಂತೆ ಪ್ರಧಾನ ಮಂತ್ರಿ ಕಚೇರಿಯ(ಪಿಎಂಒ) ಸಾರ್ವಜನಿಕ ಕುಂದುಕೊರತೆ ಪೋರ್ಟಲ್‌ನಲ್ಲಿ ದಾಖಲಿಸಲಾಗಿರುವ 12,000ಕ್ಕೂ ಅಧಿಕ ದೂರುಗಳು ಬಾಕಿ ಉಳಿದಿವೆ ಎಂದು ಬುಧವಾರ ಲೋಕಸಭೆಗೆ ತಿಳಿಸಲಾಗಿದೆ.

ಕೇಂದ್ರದ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ADVERTISEMENT

https://www.pmindia.gov.in ಪೋರ್ಟಲ್ ಅನ್ನು ಕೇಂದ್ರದ ವಿವಿಧ ಸಚಿವಾಲಯಗಳ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿವಿಧ ಇಲಾಖೆಗಳ ಕುರಿತಾದ ದೂರುಗಳನ್ನು ದಾಖಲಿಸಲು ತೆರೆಯಲಾಗಿದೆ ಎಂದು ತಿಳಿಸಿದರು.

ದೂರು ದಾಖಲಿಸುವ ವೇಳೆ ಕ್ರಿಯೇಟ್ ಆಗುವ ವಿಶೇಷ ನೋಂದಣಿ ಐಡಿ ಮೂಲಕ ದೂರುದಾರರು ತಮ್ಮ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಲೋಕಸಭೆಗೆ ಸಚಿವರು ಹಂಚಿಕೊಂಡಿರುವ ಅಂಕಿ ಅಂಶದ ಪ್ರಕಾರ, ಈ ವರ್ಷ ಜನವರಿಯಿಂದ ಜೂನ್‌ವರೆಗೆ 58,612 ದೂರುಗಳನ್ನು ಸ್ವೀಕರಿಸಲಾಗಿದೆ ಕಳೆದ ವರ್ಷ ದಾಖಲಾದ ಬಾಕಿ ಇದ್ದ 34,659 ದೂರುಗಳನ್ನು ಈ ವರ್ಷ ವಿಲೇವಾರಿ ಮಾಡಲಾಗುತ್ತಿದೆ.

ಈ ಪೈಕಿ 80,513 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 12,758 ದೂರುಗಳು ಬಾಕಿ ಉಳಿದಿವೆ.

2023ರಲ್ಲಿ, 1,84,227 ದೂರುಗಳನ್ನು ಸ್ವೀಕರಿಸಲಾಗಿದೆ (ಹಿಂದಿನ ವರ್ಷದಿಂದ ಫಾರ್ವರ್ಡ್ ಆದ 19,705 ದೂರುಗಳು ಸೇರಿ). ಈ ಪೈಕಿ, 1,69,273 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, ಬಾಕಿ ಇದ್ದ 34,659 ದೂರುಗಳನ್ನು ಈ ವರ್ಷಕ್ಕೆ ಫಾರ್ವರ್ಡ್ ಮಾಡಲಾಗಿದೆ.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಸಂಬಂಧಿತ ಬಾಕಿ ದೂರುಗಳ ಪಟ್ಟಿಯನ್ನು ಸಚಿವರು ಹಂಚಿಕೊಂಡಿದ್ದಾರೆ.

ಈ ವರ್ಷ ಜನವರಿಯಿಂದ ಜೂನ್‌ವರೆಗೆ 46,696 ದೂರುಗಳು ದಾಖಲಾಗಿದ್ದು, ಈ ಪೈಕಿ 46,219 ದೂರುಗಳ ವಿಲೇವಾರಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.