ADVERTISEMENT

ದೆಹಲಿ ಸರ್ಕಾರಿ ಶಾಲೆಯ 1400ಕ್ಕೂ ಹೆಚ್ಚು ಮಕ್ಕಳು ನೀಟ್‌–ಯುಜಿ ಪಾಸ್‌

ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವೆ ಅತಿಶಿ ಹೇಳಿಕೆ

ಪಿಟಿಐ
Published 7 ಜೂನ್ 2024, 15:54 IST
Last Updated 7 ಜೂನ್ 2024, 15:54 IST
<div class="paragraphs"><p>ಸಚಿವೆ ಅತಿಶಿ</p></div>

ಸಚಿವೆ ಅತಿಶಿ

   

ನವದೆಹಲಿ: ದೆಹಲಿ ಸರ್ಕಾರಿ ಶಾಲೆಯ 1400ಕ್ಕೂ ಹೆಚ್ಚು ಮಕ್ಕಳು ಈ ವರ್ಷ ನೀಟ್‌ (ಯುಜಿ) ಪರೀಕ್ಷೆ ಪಾಸಾಗಿದ್ದಾರೆ ಎಂದು ಶಿಕ್ಷಣ ಸಚಿವೆ ಅತಿಶಿ ಹೇಳಿದ್ದಾರೆ.

ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮಂಗಳವಾರ ಪ್ರಕಟಿಸಿತ್ತು. 

ADVERTISEMENT

‘ದೆಹಲಿಯ 1,414 ಮಕ್ಕಳು ಈ ವರ್ಷ ನೀಟ್‌–ಯುಜಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ‘ ಎಂದು ಅತಿಶಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ವರ್ಷದಿಂದ ವರ್ಷಕ್ಕೆ ಅರ್ಹತೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. 2020ರಲ್ಲಿ 569 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದರು. ಈ ವರ್ಷ ಎರಡೂವರೆ ಪಟ್ಟು ಸಂಖ್ಯೆ ಹೆಚ್ಚಳವಾಗಿದೆ’ ಎಂದು ಅತಿಶಿ ಹೇಳಿದ್ದಾರೆ. 

‘ಅರವಿಂದ ಕೇಜ್ರಿವಾಲ್ ಸರ್ಕಾರದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಸ್ಪೆಷಲೈಜ್ಡ್‌ ಎಕ್ಸಲೆನ್ಸ್‌ನ ಎಸ್‌ಟಿಇಎಮ್‌ ಸ್ಟ್ರೀಮ್‌ ಅಡಿಯಲ್ಲಿ 255 ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಗೆ ಹಾಜರಾಗಿದ್ದು, 243 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ’ ಎಂದು ಅತಿಶಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.