ನವದೆಹಲಿ: ಹರ್ ಘರ್ ಜಲ್ ಯೋಜನೆಯಡಿ ದೇಶದ ವಿವಿಧ ಭಾಗಗಳಲ್ಲಿ 15 ಕೋಟಿಗೂ ಹೆಚ್ಚು ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಗುರುವಾರ ತಿಳಿಸಿದ್ದಾರೆ,
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಪಾಟೀಲ್, ‘ದೇಶದ ಎಲ್ಲ ನಾಗರಿಕರಿಗೂ ಕುಡಿಯುವ ನೀರನ್ನು ಪೂರೈಸುವುದು ಪ್ರಧಾನ ಮಂತ್ರಿಗಳ ಗುರಿಯಾಗಿತ್ತು. ಅದರಂತೆ 15 ಕೋಟಿ ಸಂಪರ್ಕಗಳನ್ನು ನೀಡಲಾಗಿದೆ’ ಎಂದರು.
ದೇಶದ ಪ್ರತಿಯೊಂದು ಗ್ರಾಮಗಳ ಮನೆಗೆ ನಲ್ಲಿ ನೀರನ್ನು ಪೂರೈಸುವ ಉದ್ದೇಶದಿಂದ ರಾಜ್ಯಸರ್ಕಾರಗಳ ಸಹಯೋಗದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಹರ್‌ಘರ್ ಜಲ್ ಯೋಜನೆ ಜಾರಿ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.