ನವದೆಹಲಿ:ಫೆಬ್ರುವರಿ 9ರ ವರೆಗೆ 20 ದೇಶಗಳಿಗೆ 167 ಲಕ್ಷ ಡೋಸ್ ಕೋವಿಡ್-19 ಲಸಿಕೆಯನ್ನು ಸರಬರಾಜು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.
ದೇಶೀಯ ಉತ್ಪಾದನೆ ಮತ್ತು ರಾಷ್ಟ್ರೀಯ ಲಸಿಕಾ ಅಭಿಯಾನಕ್ಕೆ ಸಾಕಷ್ಟು ಲಭ್ಯತೆಯ ಬಳಿಕ ಲಸಿಕೆಯ ಬಾಹ್ಯ ಸರಬರಾಜುಗಳನ್ನು ಹಮ್ಮಿಕೊಳ್ಳಲಾಗಿದೆ ಎಂದವರು ಪ್ರತಿಪಾದಿಸಿದ್ದಾರೆ.
'2021 ಫೆಬ್ರವರಿ 9ರ ವರೆಗೆ 20 ದೇಶಗಳಿಗೆ 167.7 ಲಕ್ಷ ಡೋಸ್‌ಗಳನ್ನು ಸರಬರಾಜು ಮಾಡಲಾಗಿದೆ. ಇದರಲ್ಲಿ 13 ದೇಶಗಳಿಗೆ 62.7 ಲಕ್ಷ ಡೋಸ್ ಉಡುಗೊರೆಯಾಗಿ ಮತ್ತು ಎಂಟು ದೇಶಗಳು 105 ಲಕ್ಷ ಡೋಸ್‌ಗಳನ್ನು ವಾಣಿಜ್ಯೀಕರಣವಾಗಿ ಖರೀದಿಸಿವೆ' ಎಂದು ಚೌಬೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕೋವ್ಯಾಕ್ಸ್ ಸೌಲಭ್ಯದ ಜೊತೆಗೆ, ಬಾಹ್ಯ ಸರಬರಾಜು ದ್ವಿಪಕ್ಷೀಯವಾಗಿ ಭಾರತ ಸರ್ಕಾರದ ಉಡುಗೊರೆಗಳ ಮೂಲಕ ಮತ್ತು ಉತ್ಪಾದಕರಿಂದ ವಾಣಿಜ್ಯ ಮಾರಾಟದ ಮೂಲಕವಿತರಿಸುತ್ತಿದೆ.
ಇತರ ದೇಶಗಳಿಗೆ ಲಸಿಕೆಗಳ ಪೂರೈಕೆಯು ದೇಶದಲ್ಲಿ ರೋಗವನ್ನು ನಿಯಂತ್ರಿಸುವಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುತ್ತದೆಯೇ ಎಂಬುದಕ್ಕೆ ಉತ್ತರಿಸಿದ ಚೌಬೆ, 'ದೇಶೀಯ ಉತ್ಪಾದನೆ ಮತ್ತು ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಸಾಕಷ್ಟು ಲಭ್ಯತೆಯ ಬಳಿಕಇತರ ದೇಶಗಳಿಗೆ ಸರಬರಾಜು ಮಾಡಲಾಗುತ್ತಿದೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.