ADVERTISEMENT

ಅಮರನಾಥ ಯಾತ್ರೆ ಹೊರಟ 1,700ಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ 30ನೇ ತಂಡ

ಪಿಟಿಐ
Published 27 ಜುಲೈ 2024, 5:23 IST
Last Updated 27 ಜುಲೈ 2024, 5:23 IST
<div class="paragraphs"><p>ಅಮರನಾಥ ಯಾತ್ರೆ</p></div>

ಅಮರನಾಥ ಯಾತ್ರೆ

   

(ಪಿಟಿಐ ಚಿತ್ರ)

ಜಮ್ಮು: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇಗುಲಕ್ಕೆ 1,700ಕ್ಕೂ ಹೆಚ್ಚು ಯಾತ್ರಿಗಳನ್ನು ಒಳಗೊಂಡ 30ನೇ ತಂಡ ಇಲ್ಲಿನ ಮೂಲ ಶಿಬಿರದಿಂದ ಶನಿವಾರ ಮುಂಜಾನೆ ಪ್ರಯಾಣ ಬೆಳೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

3,880 ಮೀಟರ್ ಎತ್ತರದ ಪವಿತ್ರ ಗುಹೆ ಗುಹಾ ದೇಗುಲಗಕ್ಕೆ ಈ ವರ್ಷ ಇದುವರೆಗೆ 4.45 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪೂಜೆ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ 4.5 ಲಕ್ಷ ಭಕ್ತರು ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದರು.

30ನೇ ತಂಡದ ಯಾತ್ರಿಕರು 63 ವಾಹನಗಳ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಭದ್ರತೆಯೊಂದಿಗೆ ಮುಂಜಾನೆ 3:25ಕ್ಕೆ ಜಮ್ಮುವಿನ ಭಗವತಿ ನಗರದ ಮೂಲ ಶಿಬಿರದಿಂದ ಹೊರಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

999 ಯಾತ್ರಾರ್ಥಿಗಳು ಸಾಂಪ್ರದಾಯಿಕ 48 ಕಿ.ಮೀ. ಉದ್ದದ ಪಹಲ್ಗಾಮ್ ಮಾರ್ಗದಲ್ಲಿ ತೆರಳಿದರೆ, 772 ಯಾತ್ರಿಕರು 14 ಕಿ.ಮೀ. ಕಡಿದಾದ ಬಾಲ್ಟಾಲ್ ಮಾರ್ಗವನ್ನು ಆಯ್ದುಕೊಂಡಿದ್ದಾರೆ.

ಜೂನ್ 29ರಂದು ಆರಂಭಗೊಂಡಿರುವ ಅಮರನಾಥ ಯಾತ್ರೆ ಆಗಸ್ಟ್ 19ರಂದು ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.