ADVERTISEMENT

ಮಾದಕವಸ್ತು ಜಾಲ: ದೆಹಲಿಯಲ್ಲಿ ಮತ್ತೊಂದು ಪ್ರಕರಣ ಬೇಧಿಸಿದ ಪೊಲೀಸರು

ಪಿಟಿಐ
Published 11 ಅಕ್ಟೋಬರ್ 2024, 3:00 IST
Last Updated 11 ಅಕ್ಟೋಬರ್ 2024, 3:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಪಶ್ಚಿಮ ದೆಹಲಿಯ ಬಾಡಿಗೆ ಮಳಿಗೆಯೊಂದರಲ್ಲಿ ₹ 2,080 ಮೊತ್ತದ 208 ಕೆ.ಜಿ.ಯಷ್ಟು ಕೊಕೇನ್‌ ಅನ್ನು ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ, ರಾಷ್ಟ್ರ ರಾಜಧಾನಿಯಲ್ಲಿ ವಾರದ ಅಂತರದಲ್ಲೇ ಎರಡನೇ ಅತಿದೊಡ್ಡ ಮಾದಕವಸ್ತು ಜಾಲವನ್ನು ಬೇಧಿಸಿದಂತಾಗಿದೆ.

'ಪಶ್ಚಿಮ ದೆಹಲಿಯ ರಮೇಶ್‌ ನಗರ ಪ್ರದೇಶದಲ್ಲಿರುವ ಸಣ್ಣ ಮಳಿಗೆಯೊಂದರಲ್ಲಿ, 'ಟೇಸ್ಟೀ ಟ್ರೀಟ್‌' ಹಾಗೂ 'ಚಟ್‌ಪಟಾ ಮಿಕ್ಸರ್‌' ಎಂದು ಬರೆಯಲಾಗಿದ್ದ ಪ್ಲಾಸ್ಟಿಕ್‌ ಪ್ಯಾಕೆಟ್‌ಗಳಲ್ಲಿ ಮಾದಕ ವಸ್ತುವನ್ನು ಇಡಲಾಗಿತ್ತು. ಸುಮಾರು 20-25 ಪ್ಯಾಕೆಟ್‌ಗಳಿದ್ದ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದೇವೆ' ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ನೈಋತ್ಯ ದೆಹಲಿಯ ಮಹಿಪಾಲ್‌ಪುರ ಬಡಾವಣೆಯಲ್ಲಿ ಸುಮಾರು ₹ 5,000 ಕೋಟಿಗೂ ಅಧಿಕ ಬೆಲೆಯ 562 ಕೆ.ಜಿ. ಮಾದಕ ವಸ್ತುವನ್ನು ಅಕ್ಟೋಬರ್‌ 2 ರಂದು ವಶಪಡಿಸಿಕೊಳ್ಳಲಾಗಿತ್ತು.

'ಮಹಿಪಾಲ್‌ಪುರ ಪ್ರಕರಣದ ತನಿಖೆ ಸಂದರ್ಭದಲ್ಲಿ ದೊರೆತ ಸುಳಿವು ಆಧರಿಸಿ ನಮ್ಮ ವಿಶೇಷ ತಂಡವು ಮಳಿಗೆ ಮೇಲೆ ಗುರುವಾರ ಸಂಜೆ ದಾಳಿ ನಡೆಸಿತ್ತು. ಭಾರತೀಯ ಮೂಲದ ಯುಎಸ್‌ ಪ್ರಜೆ ಕೆಲವು ದಿನಗಳ ಹಿಂದಷ್ಟೇ ಮಳಿಗೆಯನ್ನು ಬಾಡಿಗೆ ಪಡೆದಿದ್ದ. ನಮ್ಮ ತಂಡ ಸ್ಥಳಕ್ಕೆ ತೆರಳುವ ಮುನ್ನ, ಆತ ಪರಾರಿಯಾಗಿದ್ದಾನೆ. ಸದ್ಯ ಮಳಿಗೆಯ ಮಾಲೀಕ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ' ಎಂದು ವಿವರಿಸಿದ್ದಾರೆ.

'ಗಾರ್ಮೆಂಟ್ಸ್ ವ್ಯವಹಾರಕ್ಕಾಗಿ ಮಳಿಗೆಯನ್ನು ಬಾಡಿಗೆಗೆ ನೀಡಿದ್ದಾಗಿ ಎಂದು ಮಾಲೀಕರು ಹೇಳಿಕೆ ನೀಡಿದ್ದಾರೆ. ಪರಾರಿಯಾಗಿರುವ ವ್ಯಕ್ತಿಯು, ದೇಶದ ವಿವಿಧ ಭಾಗಗಳಿಗೆ ಮಾದಕವಸ್ತು ಸರಬರಾಜು ಮಾಡುವ ಯೋಜನೆಯಲ್ಲಿದ್ದ ಎಂದು ಶಂಕಿಸಲಾಗಿದೆ' ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.