ನವದೆಹಲಿ: ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಈವರೆಗೆ ಸುಮಾರು 200 ವಿಶ್ವವಿದ್ಯಾಲಯಗಳು ‘ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆ’ (ಸಿಯುಇಟಿ) ಅಳವಡಿಸಿಕೊಂಡಿವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧಿಕಾರಿಗಳು ತಿಳಿಸಿದ್ದಾರೆ.
‘44 ಕೇಂದ್ರೀಯ ಹಾಗೂ 33 ರಾಜ್ಯ ವಿಶ್ವವಿದ್ಯಾಲಯಗಳು ಸೇರಿ 206 ವಿಶ್ವವಿದ್ಯಾಲಯಗಳು ಸಿಇಯುಟಿ ಅಳವಡಿಸಿಕೊಂಡಿವೆ’ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಕೇವಲ 90 ವಿಶ್ವವಿದ್ಯಾಲಯಗಳು ಸಿಯುಇಟಿ ಅಳವಡಿಸಿಕೊಂಡಿದ್ದವು. ಸಿಯುಇಟಿ ಅಳವಡಿಕೆಗೆ ಮಾ.30 ಕೊನೆಯ ದಿನಾಂಕವಾಗಿದ್ದು, ಇನ್ನೂ ಹೆಚ್ಚಿನ ವಿ.ವಿಗಳು ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ.
ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಪ್ರವೇಶಕ್ಕೆ 12ನೇ ತರಗತಿಯ ಅಂಕಗಳ ಬದಲಾಗಿ ಪ್ರವೇಶ ಪರೀಕ್ಷೆಯ ಅಂಕಗಳನ್ನು ಮಾನದಂಡವಾಗಿ ಬಳಸಬಹುದು ಎಂದು ಯುಜಿಸಿ ಕಳೆದ ವರ್ಷ ಘೋಷಿಸಿತ್ತು.
ಮೇ 21ರಿಂದ 31ರ ವರೆಗೆ ಪ್ರವೇಶ ಪರೀಕ್ಷೆ ನಡೆಸಲು ವೇಳಾಪಟ್ಟಿ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.