ADVERTISEMENT

ಕಾಶ್ಮೀರ ಮ್ಯಾರಥಾನ್‌ | ನಟ ಸುನೀಲ್‌ ಶೆಟ್ಟಿ ಸೇರಿ 2,000 ಕ್ರೀಡಾಪಟುಗಳು ಭಾಗಿ

ಪಿಟಿಐ
Published 20 ಅಕ್ಟೋಬರ್ 2024, 7:35 IST
Last Updated 20 ಅಕ್ಟೋಬರ್ 2024, 7:35 IST
<div class="paragraphs"><p>ಕಾಶ್ಮೀರ ಮ್ಯಾರಥಾನ್‌ಗೆ ಚಾಲನೆ ನೀಡಿದ ಸಿಎಂ&nbsp;ಒಮರ್‌ ಅಬ್ದುಲ್ಲಾ ಮತ್ತು ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ</p></div>

ಕಾಶ್ಮೀರ ಮ್ಯಾರಥಾನ್‌ಗೆ ಚಾಲನೆ ನೀಡಿದ ಸಿಎಂ ಒಮರ್‌ ಅಬ್ದುಲ್ಲಾ ಮತ್ತು ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

   

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಕ್ರೀಡಾಕೂಟ ‘ಕಾಶ್ಮೀರ ಮ್ಯಾರಥಾನ್‌’ಗೆ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಇಂದು (ಭಾನುವಾರ) ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಅಬ್ದುಲ್ಲಾ ಅವರೊಂದಿಗೆ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಇದ್ದರು.

ADVERTISEMENT

ಮ್ಯಾರಥಾನ್‌‌‌ನಲ್ಲಿ ದೇಶದ ಉತ್ತಮ ಓಟಗಾರರು, ಏಷ್ಯನ್‌ ಚಿನ್ನದ ಪದಕ ವಿಜೇತರು, ಯುರೋಪ್‌, ಆಫ್ರಿಕಾದ ಅತ್ಯುತ್ತಮ ಓಟಗಾರರು ಸೇರಿದಂತೆ ದೇಶ ಮತ್ತು ವಿದೇಶಗಳ ಸುಮಾರು 2,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

42 ಕಿ.ಮೀ ಪೂರ್ಣ ಮ್ಯಾರಥಾನ್‌ ಮತ್ತು 21 ಕಿ.ಮೀ ಅರ್ಧ ಮ್ಯಾರಥಾನ್‌ ಎಂಬ ಎರಡು ವಿಭಾಗದಲ್ಲಿ ಓಟವನ್ನು ಆಯೋಜಿಸಲಾಗಿದೆ.

‘ಕಣಿವೆ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂಬುದನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾಶ್ಮೀರವು ಎಲ್ಲರಿಗೂ ಮುಕ್ತವಾಗಿದೆ. ಪ್ರಪಂಚದ ವಿವಿಧ ಭಾಗಗಳ ಪ್ರವಾಸಿಗರನ್ನು ನಾವು ಸ್ವಾಗತಿಸುತ್ತೇವೆ’ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜ ಯಾಕೂಬ್‌ ಹೇಳಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.