ADVERTISEMENT

‘ನ್ಯೂಸ್ ಕ್ಲಿಕ್‌’ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 16:36 IST
Last Updated 11 ಆಗಸ್ಟ್ 2023, 16:36 IST
ನ್ಯೂಸ್‌ ಕ್ಲಿಕ್‌ ಲೋಗೊ
ನ್ಯೂಸ್‌ ಕ್ಲಿಕ್‌ ಲೋಗೊ   ಕೃಪೆ: X/@newsclickin

ನವದೆಹಲಿ: ಆನ್‌ಲೈನ್ ನ್ಯೂಸ್ ಪೋರ್ಟಲ್ ‘ನ್ಯೂಸ್ ಕ್ಲಿಕ್’ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಿವೃತ್ತ ನ್ಯಾಯಮೂರ್ತಿಗಳು, ರಾಯಭಾರಿಗಳು ಸೇರಿದಂತೆ ಸುಮಾರು 250ಕ್ಕೂ ಹೆಚ್ಚಿನ ನಾಗರಿಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸಿಜೆಐ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ. 

‘ಕೇಂದ್ರ ಸರ್ಕಾರವು ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಷ್ಟ್ರಪತಿ ಹಾಗೂ ಸಿಜೆಐ ಅವರು ನಿರ್ದೇಶನ ನೀಡಬೇಕು’ಎಂದೂ ಪತ್ರದಲ್ಲಿ ಒತ್ತಾಯಿಸಲಾಗಿದೆ.  

ತೆಲಂಗಾಣದ ನಿವೃತ್ತ ನ್ಯಾಯಮೂರ್ತಿ ಕೆ. ಶ್ರೀಧರ್ ರಾವ್ ಸೇರಿದಂತೆ 13 ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಗೃಹ ಕಾರ್ಯದರ್ಶಿ ಎಲ್‌.ಸಿ. ಗೋಯಲ್, ಮಾಜಿ ‘ರಾ’ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಎನ್‌ಐಎ ಮಾಜಿ ನಿರ್ದೇಶಕ ಯೋಗೇಶ್ ಚಂದೇರ್ ಮೋದಿ, 12 ಮಾಜಿ ರಾಯಭಾರಿಗಳು, 20 ಮಾಜಿ ಡಿಜಿಪಿಗಳು ಸೇರಿದಂತೆ ಇತರರು ಪತ್ರ ಬರೆದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.