ADVERTISEMENT

ವಯನಾಡ್ ಭೂಕುಸಿತ: ಪರಿಹಾರ ಶಿಬಿರಗಳಲ್ಲಿ 2,500ಕ್ಕೂ ಹೆಚ್ಚು ಜನರಿಗೆ ಆಶ್ರಯ

ಪಿಟಿಐ
Published 5 ಆಗಸ್ಟ್ 2024, 5:17 IST
Last Updated 5 ಆಗಸ್ಟ್ 2024, 5:17 IST
<div class="paragraphs"><p>ವಯನಾಡಿನ ಪರಿಹಾರ ಶಿಬಿರದಲ್ಲಿ ಮಕ್ಕಳು</p></div>

ವಯನಾಡಿನ ಪರಿಹಾರ ಶಿಬಿರದಲ್ಲಿ ಮಕ್ಕಳು

   

ಪಿಟಿಐ

ವಯನಾಡ್‌: ಮಕ್ಕಳು, ಗರ್ಭಿಣಿ ಮಹಿಳೆಯರು ಸೇರಿದಂತೆ 2,500ಕ್ಕೂ ಜನರು ವಯನಾಡಿನ ವಿವಿಧ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿಗಳ ಕಚೇರಿ(ಸಿಎಂಒ) ಬಿಡುಗಡೆ ಮಾಡಿದ ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ವಿಪತ್ತು ಪೀಡಿತ ಪ್ರದೇಶ ವಯನಾಡಿನ ಮೆಪ್ಪಾಡಿ ಮತ್ತು ಇತರ ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 16 ಶಿಬಿರಗಳನ್ನು ಸ್ಥಾಪಿಸಲಾಗಿದೆ.

‘723 ಕುಟುಂಬಗಳಿಗೆ ಸೇರಿದ 2,514 ಜನರು ವಯನಾಡಿನ ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರಲ್ಲಿ 943 ಪುರುಷರು, 972 ಮಹಿಳೆಯರು ಮತ್ತು 599 ಮಕ್ಕಳು ಇದ್ದಾರೆ’ ಎಂದು ಸಿಎಂಒ ತಿಳಿಸಿದೆ.

‘ಪರಿಹಾರ ಶಿಬಿರದಲ್ಲಿರುವ ಒಟ್ಟು ಮಹಿಳೆಯರಲ್ಲಿ ಆರು ಮಂದಿ ಗರ್ಭಿಣಿಯಾಗಿದ್ದಾರೆ’ ಎಂದೂ ಅದು ಹೇಳಿದೆ.

ಇನ್ನೂ ವಯನಾಡ್ ಭೂಕುಸಿತದಲ್ಲಿ ಮೃತರ ಸಂಖ್ಯೆ 221ಕ್ಕೆ ಏರಿಕೆಯಾಗಿದೆ. 180 ಜನರು ನಾಪತ್ತೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.