ADVERTISEMENT

ಎಎಪಿ ಸರ್ಕಾರದ ವಿಮಾ ಯೋಜನೆಯಡಿ ವಕೀಲರ ಕುಟುಂಬಗಳಿಗೆ ಆರ್ಥಿಕ ನೆರವು: ಅತಿಶಿ

ಪಿಟಿಐ
Published 8 ಸೆಪ್ಟೆಂಬರ್ 2024, 5:02 IST
Last Updated 8 ಸೆಪ್ಟೆಂಬರ್ 2024, 5:02 IST
<div class="paragraphs"><p>ಸಚಿವೆ ಅತಿಶಿ</p></div>

ಸಚಿವೆ ಅತಿಶಿ

   

ಪಿಟಿಐ

ನವದೆಹಲಿ: ಮುಖ್ಯಮಂತ್ರಿ ವಕೀಲರ ಕಲ್ಯಾಣ ಯೋಜನೆ ಅಡಿಯಲ್ಲಿ 200ಕ್ಕೂ ಹೆಚ್ಚು ಮೃತ ವಕೀಲರ ಕುಟುಂಬಗಳಿಗೆ ₹15 ಕೋಟಿಗೂ ಅಧಿಕ ಆರ್ಥಿಕ ನೆರವು ನೀಡಲಾಗಿದೆ. ಜತೆಗೆ, 2,500ಕ್ಕೂ ಹೆಚ್ಚು ವಕೀಲರು ಮತ್ತು ಅವರ ಕುಟುಂಬಸ್ಥರು ವೈದ್ಯಕೀಯ ವಿಮಾ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ದೆಹಲಿ ಕಾನೂನು ಸಚಿವೆ ಅತಿಶಿ ಹೇಳಿದ್ದಾರೆ.

ADVERTISEMENT

ದ್ವಾರಕಾ ಜಿಲ್ಲಾ ನ್ಯಾಯಾಲಯದ 17ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ವಕೀಲರ ಕುರಿತು ಎಲ್ಲಾ ಜವಾಬ್ದಾರಿಗಳನ್ನು ಎಎಪಿ ಸರ್ಕಾರ ನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಸರ್ಕಾರವು ವಕೀಲರ ಕೊಠಡಿಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡಿದ ದೇಶದ ಮೊದಲ ಸರ್ಕಾರವಾಗಿದೆ’ ಎಂದು ಹೇಳಿದ್ದಾರೆ.

‘ಈವರೆಗೆ ಸುಮಾರು 28,000 ವಕೀಲರು ಮುಖ್ಯಮಂತ್ರಿ ವಕೀಲರ ಕಲ್ಯಾಣ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯು ಕೋವಿಡ್ ಸಮಯದಲ್ಲಿ ವಕೀಲರಿಗೆ ಬಹಳ ಸಹಾಯಕವಾಗಿದೆ. ನಮ್ಮ ಸರ್ಕಾರವು ವಕೀಲರ ಬಗೆಗಿನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸುತ್ತಿದೆ. ನಾವು ಅದನ್ನು ಮುಂದುವರಿಸುತ್ತೇವೆ ಮತ್ತು ವಕೀಲರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತೇವೆ’ ಎಂದು ಅತಿಶಿ ತಿಳಿಸಿದ್ದಾರೆ.

2019ರಲ್ಲಿ ವಕೀಲರ ಶ್ರೇಯೋಭಿವೃದ್ಧಿಗಾಗಿ ಎಎಪಿ ಸರ್ಕಾರವು ಮುಖ್ಯಮಂತ್ರಿ ವಕೀಲರ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿತ್ತು. ಇದರಡಿಯಲ್ಲಿ ವಕೀಲರಿಗೆ ₹10 ಲಕ್ಷ ಮೊತ್ತದ ವಿಮಾ ಯೋಜನೆ ಮತ್ತು ₹5 ಲಕ್ಷ ವೈದ್ಯಕೀಯ ವಿಮೆಯನ್ನು ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.