ADVERTISEMENT

ಅಮರನಾಥ ಯಾತ್ರೆ ಹೊರಟ 3 ಸಾವಿರಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ 28ನೇ ತಂಡ

ಪಿಟಿಐ
Published 25 ಜುಲೈ 2024, 6:22 IST
Last Updated 25 ಜುಲೈ 2024, 6:22 IST
<div class="paragraphs"><p> ಅಮರನಾಥ ಯಾತ್ರೆ (ಸಂಗ್ರಹ ಚಿತ್ರ)</p></div>

ಅಮರನಾಥ ಯಾತ್ರೆ (ಸಂಗ್ರಹ ಚಿತ್ರ)

   

ಜಮ್ಮು: ಮೂರು ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಒಳಗೊಂಡ 28ನೇ ತಂಡವು ಜಮ್ಮುವಿನಿಂದ ಅಮರನಾಥ ಗುಹಾ ದೇವಾಲಯದ ಕಡೆಗೆ ಇಂದು(ಗುರುವಾರ) ಮುಂಜಾನೆ ಪ್ರಯಾಣ ಬೆಳೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೈಸರ್ಗಿಕವಾಗಿ ರೂಪುಗೊಂಡಿರುವ ಶಿವನ ಲಿಂಗದ ದರ್ಶನವನ್ನು ಈಗಾಗಲೇ 4.25 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಡೆದಿದ್ದಾರೆ. ಈ ಹಿಂದೆ 4.5 ಲಕ್ಷ ಮಂದಿ ದರ್ಶನ ಪಡೆದಿದ್ದರು ಎಂದು ತಿಳಿಸಿದರು.

ADVERTISEMENT

ಸಿಆರ್‌ಪಿಎಫ್‌ ಭದ್ರತಾ ಪಡೆಯ ಬೆಂಗಾವಲಿನಲ್ಲಿ 3,089 ಯಾತ್ರಾರ್ಥಿಗಳನ್ನೊಳಗೊಂಡ ತಂಡ 106 ವಾಹನಗಳಲ್ಲಿ ಭಗವತಿ ನಗರ ಬೇಸ್‌ಕ್ಯಾಂಪ್‌ನಿಂದ ಮುಂಜಾನೆ 3.23 ವೇಳೆಗೆ ಪ್ರಯಾಣ ಬೆಳೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜೂನ್ 29 ರಂದು ಆರಂಭವಾದ ಈ ಯಾತ್ರೆಯು, ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.