ADVERTISEMENT

ರೈಲಿನಲ್ಲಿ ಟಿಕೆಟ್ ರಹಿತ ಪ್ರಯಾಣ: 400 ಕ್ಕೂ ಹೆಚ್ಚು ಪೊಲೀಸರಿಗೆ ದಂಡ

ಪಿಟಿಐ
Published 18 ಅಕ್ಟೋಬರ್ 2024, 14:49 IST
Last Updated 18 ಅಕ್ಟೋಬರ್ 2024, 14:49 IST
<div class="paragraphs"><p>ರೈಲು </p></div>

ರೈಲು

   

(ಪ್ರಾತಿನಿಧಿಕ ಚಿತ್ರ)

ನವದೆಹಲಿ: ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ 400 ಕ್ಕೂ ಹೆಚ್ಚು ಪೊಲೀಸರಿಗೆ ದಂಡ ವಿಧಿಸಲಾಗಿದೆ.

ADVERTISEMENT

ವಿಶೇಷವೆಂದರೆ ಒಂದೇ ತಿಂಗಳಿನಲ್ಲಿ ಈ ದಂಡ ವಿಧಿಸಲಾಗಿದೆ. ಗಾಜಿಯಬಾದ್–ಕಾನ್ಪುರ್ ಮಧ್ಯ ಸಂಚರಿಸುತ್ತಿದ್ದ ವಿವಿಧ ರೈಲುಗಳಲ್ಲಿ ಇತ್ತೀಚೆಗೆ ಟಿಕೆಟ್ ಇಲ್ಲದೇ ಪೊಲೀಸರು ಪ್ರಯಾಣ ಮಾಡುತ್ತಿರುವುದು ಹೆಚ್ಚುತ್ತಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಯಾಗರಾಜ ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಸಂಚಾರ ದಳದ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಕೈಗೊಂಡು ಒಂದೇ ತಿಂಗಳಿನಲ್ಲಿ ಕ್ರಮ ವಹಿಸಿದಾಗ 400 ಕ್ಕೂ ಹೆಚ್ಚು ಪೊಲೀಸರು ಟಿಕೆಟ್ ಇಲ್ಲದೇ ಪ್ರಯಾಣ ಮಾಡುತ್ತಿದ್ದದ್ದು ಕಂಡು ಬಂದಿದೆ ಎಂದು ತಿಳಿಸಿದೆ.

ಈ ಪೊಲೀಸರು ಬೇರೆ ಪ್ರಯಾಣಿಕರಿಗೆ ನಿಗದಿಯಾಗಿದ್ದ ಸೀಟುಗಳನ್ನು ಆಕ್ರಮಿಸುವುದಲ್ಲದೇ ಪ್ರಯಾಣಿಕರಿಗೆ ಬೆದರಿಕೆ ಹಾಕುತ್ತಿದ್ದರು ಎಂದು ಪ್ರಯಾಗರಾಜ ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.