ADVERTISEMENT

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ನಾಲ್ಕೇ ವರ್ಷದಲ್ಲಿ 47 ಸಾವಿರ ದೂರುಗಳು!

ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ರಾಷ್ಟ್ರೀಯ ಆಯೋಗಕ್ಕೆ (NCSC) 47 ಸಾವಿರ ದೂರುಗಳು ದಾಖಲಾಗಿವೆ.

ಪಿಟಿಐ
Published 13 ಅಕ್ಟೋಬರ್ 2024, 7:18 IST
Last Updated 13 ಅಕ್ಟೋಬರ್ 2024, 7:18 IST
<div class="paragraphs"><p>ದೌರ್ಜನ್ಯ (ಸಾಂಕೇತಿಕ ಚಿತ್ರ)</p></div>

ದೌರ್ಜನ್ಯ (ಸಾಂಕೇತಿಕ ಚಿತ್ರ)

   

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ರಾಷ್ಟ್ರೀಯ ಆಯೋಗಕ್ಕೆ (NCSC) 47 ಸಾವಿರ ದೂರುಗಳು ದಾಖಲಾಗಿವೆ.

ಸುದ್ದಿಸಂಸ್ಥೆ ಪಿಟಿಐ ಈ ಕುರಿತು ಮಾಹಿತಿ ಕೇಳಿ ಆಯೋಗಕ್ಕೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿತ್ತು.

ADVERTISEMENT

ಸಲ್ಲಿಕೆಯಾಗಿರುವ ದೂರುಗಳಲ್ಲಿ ಜಾತಿ ನಿಂದನೆಯ ದೂರುಗಳು ಹೆಚ್ಚಿವೆ. ನಂತರದ ಸ್ಥಾನದಲ್ಲಿ ಭೂ ವಿವಾದ ತದನಂತರ ಸರ್ಕಾರಿ ಉದ್ಯೋಗಿಗಳ ವ್ಯಾಜ್ಯಗಳಾಗಿವೆ.

2020–21 ರಲ್ಲಿ 11,917 ಪ್ರಕರಣಗಳು ದಾಖಲಾಗಿವೆ

2021–22 ರಲ್ಲಿ 13,964 ಪ್ರಕರಣಗಳು ದಾಖಲಾಗಿವೆ

2022–23 ರಲ್ಲಿ 12,402 ಪ್ರಕರಣಗಳು ದಾಖಲಾಗಿವೆ

2024 ಇಲ್ಲಿವರೆಗೆ 9,550 ಪ್ರಕರಣಗಳು ದಾಖಲಾಗಿವೆ.

‘ನಾನು ಅಧಿಕಾರವಹಿಸಿಕೊಂಡಾಗಿನಿಂದ ಕಚೇರಿಯನ್ನು ಜನಸಾಮಾನ್ಯರಿಗೆ ಮುಕ್ತವಾಗಿರಿಸಲಾಗಿದೆ. ಯಾವುದೇ ಒಂದು ದೂರನ್ನು ಗಮನಿಸದೇ ಬಿಡುವುದಿಲ್ಲ, ಅವೆಲ್ಲವನ್ನೂ ಪರಿಗಣಿಸುತ್ತೇವೆ’ ಎಂದು NCSC ಅಧ್ಯಕ್ಷ ಕಿಶೋರ್ ಮಖವಾನಾ ಹೇಳಿದ್ದಾರೆ.

ಆಯೋಗಕ್ಕೆ ಉತ್ತರ ಪ್ರದೇಶದಿಂದ ಅತಿ ಹೆಚ್ಚು ದೂರುಗಳು ದಾಖಲಾಗುತ್ತಿವೆ. ನಂತರದ ಸ್ಥಾನದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಇವೆ ಎಂದು ಅವು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.