ಶ್ರೀನಗರ(ಜಮ್ಮು): 14ನೇ ಬ್ಯಾಚ್‌ನ 4800ಕ್ಕೂ ಹೆಚ್ಚು ಭಕ್ತಾದಿಗಳು ಬಿಗಿ ಭದ್ರತೆಯೊಂದಿಗೆ ಗುರುವಾರ ಮುಂಜಾನೆ ಭಗವತಿ ನಗರ ಶಿಬಿರದಿಂದ ಅಮರನಾಥ ಯಾತ್ರೆಗೆ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಲಿಂಗ ದರ್ಶನ ಪಡೆಯಲು ಸುಮಾರು 4,885 ಯಾತ್ರಾರ್ಥಿಗಳು 191 ವಾಹನಗಳ ಕಾವಲು ಪಡೆಯೊಂದಿಗೆ ಬೆಳಗಿನ ಜಾವ 3.30ರ ಸುಮಾರಿಗೆ ಪಹಾಲ್ಗಂ ಮತ್ತು ಬಾಲ್‌ಟಾಲ್ ಬೇಸ್ ಕ್ಯಾಂಪ್‌ಗಳಿಗೆ ತೆರಳಿದ್ದಾರೆ ಎಂದು ಅವರು ತಿಳಿಸಿದರು.
ಜುಲೈ 29ರಂದು ಅಮರನಾಥ ಯಾತ್ರೆ ಪ್ರಾರಂಭಗೊಂಡಿದ್ದು, ಇದುವರೆಗೆ 77,210 ಯಾತ್ರಾರ್ಥಿಗಳು ಪ್ರಯಾಣ ಬೆಳೆಸಿದ್ದಾರೆ. ಕಳೆದ ವರ್ಷ 4.5 ಲಕ್ಷ ಭಕ್ತರು ಶಿವನ ದರ್ಶನ ಪಡೆದಿದ್ದರು.
ಆಗಸ್ 19ಕ್ಕೆ ಯಾತ್ರೆ ಮುಕ್ತಾಯಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.