ನವದೆಹಲಿ:ಟೆಲಿಕಾಂ ಕಂಪನಿಗಳ ವಿರುದ್ಧ 2021–22ರ ಅವಧಿಯಲ್ಲಿ ಮೊಬೈಲ್ ಸೇವೆಗಳಿಗೆ ಸಂಬಂಧಿಸಿದ ಸುಮಾರು 5 ಕೋಟಿಗೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಂವಹನ ಖಾತೆಯ ರಾಜ್ಯ ಸಚಿವ ದೇವುಸಿನ್ಹ ಚೌಹಾಣ್ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಚೌಹಾಣ್, ವಿವಿಧ ಟೆಲಿಕಾಂ ಕಂಪನಿಗಳ ವಿರುದ್ಧ ದಾಖಲಾಗಿರುವ ದೂರುಗಳ ಅಂಕಿ–ಅಂಶ ನೀಡಿದ್ದಾರೆ. ಅದರಂತೆ ಏರ್‌ಟೆಲ್ ವಿರುದ್ಧ2,99,68,519, ವೊಡಾಫೋನ್–ಐಡಿಯಾ ವಿರುದ್ಧ2,17,85,460 ಹಾಗೂ ರಿಲಯನ್ಸ್ ಜಿಯೊ ವಿರುದ್ಧ25.8 ಲಕ್ಷದೂರುಗಳು ಕೇಳಿ ಬಂದಿವೆ.
2021–22ರ ಅವಧಿಯಲ್ಲಿ ಗ್ರಾಹಕರುಒಟ್ಟಾರೆ 5.5 ಕೋಟಿಗೂ ಅಧಿಕ ದೂರುಗಳನ್ನು ಹೆಲ್ಪ್‌ಲೈನ್ ಸಂಖ್ಯೆಗಳ ಮೂಲಕ ನೋಂದಾಯಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಹಾಗೂ ಮಹಾನಗರ ಟೆಲಿಫೋನ್ ನಿಗಮದ ವಿರುದ್ಧ ಕ್ರಮವಾಗಿ 8.8 ಲಕ್ಷ ಮತ್ತು48,170 ದೂರುಗಳಿವೆ.
ದೂರು ಕೇಂದ್ರದ ಮೂಲಕ ಗ್ರಾಹಕರಿಂದ ಸ್ವೀಕರಿಸಿದ ದೂರುಗಳನ್ನು ಸಂಬಂಧಪಟ್ಟ ಕಂಪನಿಗಳು ಪರಿಹರಿಸಲಿವೆ. ಪರಿಹಾರ ಸಿಗದಿದ್ದರೆ, ದೂರುದಾರರು ಸಂವಹನ ಇಲಾಖೆಯ ಸಾರ್ವಜನಿಕಕುಂದುಕೊರತೆ ವಿಭಾಗವನ್ನು ಸಂಪರ್ಕಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.