ADVERTISEMENT

ದೆಹಲಿಯಲ್ಲಿ ಡ್ರಗ್ಸ್ ಮಾಫಿಯಾ: ₹5,620 ಕೋಟಿ ಬೆಲೆಯ 562 ಕೆ.ಜಿ ಕೊಕೇನ್ ವಶ

ಪಿಟಿಐ
Published 2 ಅಕ್ಟೋಬರ್ 2024, 9:41 IST
Last Updated 2 ಅಕ್ಟೋಬರ್ 2024, 9:41 IST
<div class="paragraphs"><p>ಮಾದಕ ವಸ್ತು – ಸಾಂದರ್ಭಿಕ ಚಿತ್ರ</p></div>

ಮಾದಕ ವಸ್ತು – ಸಾಂದರ್ಭಿಕ ಚಿತ್ರ

   

ನವದೆಹಲಿ: ಪ್ರಕಾಶನ ಸಂಸ್ಥೆಯೊಂದನ್ನು ನಡೆಸುತ್ತಿರುವ ಕುಟುಂಬವೊಂದರ ಯುವಕ ಸೇರಿದಂತೆ ನಾಲ್ವರನ್ನು ಬಂಧಿಸಿರುವ ದೆಹಲಿ ಪೊಲೀಸರು, ₹5,620 ಕೋಟಿ ಮೌಲ್ಯದ 562 ಕೆ.ಜಿ ಕೊಕೇನ್ ಹಾಗೂ 40 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ತುಷಾರ್ ಗೋಯಲ್, ಹಿಮಾಂಶು, ಔರಂಗಜೇಬ್ ಮತ್ತು ಭರತ್ ಜೈನ್ ಬಂಧಿತರು.

ADVERTISEMENT

ನೈಋತ್ಯ ದೆಹಲಿಯ ಮಹಿಪಾಲ್ಪುರ ಬಡಾವಣೆಯಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕವು ಆರೋಪಿಗಳನ್ನು ಮಂಗಳವಾರ ಬಂಧಿಸಿದೆ ಎಂದು ಹೆಚ್ಚುವರಿ ಆಯುಕ್ತ (ವಿಶೇಷ ಘಟಕ) ಪ್ರಮೋದ್‌ ಸಿಂಗ್ ಕುಶ್ವಾಹ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

ಬಂಧಿತ ಗೋಯಲ್, ಶ್ರೀಮಂತ ಉದ್ಯಮಿಯ ಕುಟುಂಬಕ್ಕೆ ಸೇರಿದವರು. ಔರಂಗಜೇಬ್ ಈತನ ಕಾರು ಚಾಲಕ. ಹಿಮಾಂಶು ನಿಕಟ ಸಹವರ್ತಿ. ಕೊಕೇನ್ ರಸ್ತೆ ಮೂಲಕ ತಲುಪಿದ್ದರೆ, ಗಾಂಜಾ ವಿಮಾನದ ಮೂಲಕ ತಲುಪಿದೆ. ಈ ಪ್ರಕರಣದ ಸಂಪರ್ಕ ಜಾಲವು ದೇಶದಿಂದ ಆಚೆಗೂ ಇದೆ. ಎಲ್ಲ ದೃಷ್ಟಿಕೋನಗಳಿಂದಲೂ ತನಿಖೆ ನಡೆದಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.