ನವದೆಹಲಿ (ಪಿಟಿಐ): ‘ಭಾರತದಲ್ಲಿ ಇರುವ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಶೇ 75ರಷ್ಟು ಮಂದಿಯ ರಕ್ತದೊತ್ತಡವು ನಿಯಂತ್ರಣದಲ್ಲಿ ಇಲ್ಲ’ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಜನರಲ್ ನಿಯತಕಾಲಿಕದಲ್ಲಿ ಅಧ್ಯಯನ ವರದಿಯೊಂದು ಪ್ರಕಟವಾಗಿದೆ.
ನವದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಅಮೆರಿಕದ ಬೋಸ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ತಂಡಗಳು ಈ ಅಧ್ಯಯನವನ್ನು ನಡೆಸಿವೆ. ಈ ತಂಡವು, ಭಾರತದಲ್ಲಿ 2001ರ ನಂತರ ಪ್ರಕಟವಾದ ಅಧಿಕ ರಕ್ತದೊತ್ತಡ ಪ್ರಮಾಣಗಳ ಕುರಿತ 51 ಅಧ್ಯಯನ ವರದಿಗಳನ್ನು ವಿಶ್ಲೇಷಿಸಿ ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಿದೆ.
‘ಮಹಿಳೆಯರಿಗಿಂತ ಪುರುಷರಲ್ಲಿ ಅಧಿಕರಕ್ತದೊತ್ತಡ ನಿಯಂತ್ರಣದ ಪ್ರಮಾಣ ಅತೀ ಕಡಿಮೆ ಇದೆ ಎಂದು 21 ಅಧ್ಯಯನಗಳಲ್ಲಿ ಹೇಳಲಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಈ ಪ್ರಮಾಣ ಅತೀ ಕಡಿಮೆಯಾಗಿದೆ ಎಂದು 6 ಅಧ್ಯಯನಗಳು ಹೇಳಿವೆ’ ಎಂದು ವರದಿಯಲ್ಲಿ ಹೇಳಲಾಗಿದೆ.
‘ಜೀವನಶೈಲಿಯಿಂದಾಗಿ ಅಧಿಕ ರಕ್ತದೊತ್ತಡವು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಕೆಲವು ಅಧ್ಯಯನಗಳು ಹೇಳಿವೆ’ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.