ನವದೆಹಲಿ: 2.69 ಕೋಟಿಗೂ ಹೆಚ್ಚು ಬಳಕೆಯಾಗದ ಕೋವಿಡ್ -19 ಲಸಿಕೆ ಡೋಸ್‌ಗಳು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಲಭ್ಯವಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಎಲ್ಲಾ ಮೂಲಗಳ ಮೂಲಕ ಇದುವರೆಗೆ 51.01 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ. ಇನ್ನೂ 7,53,620 ಡೋಸ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಇದರಲ್ಲಿ ವ್ಯರ್ಥವಾಗಿರುವುದು ಸೇರಿದಂತೆ ಒಟ್ಟು 48,60,15,232 ಡೋಸ್ ಅನ್ನು ಬಳಸಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕೋವಿಡ್-19 ಲಸಿಕೆಯ ಸಾರ್ವತ್ರಿಕರಣದ ಹೊಸ ಹಂತವು ಜೂನ್ 21 ರಿಂದ ಆರಂಭವಾಗಿದ್ದು, ದೇಶದಾದ್ಯಂತ ಎಲ್ಲ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.