ADVERTISEMENT

ಓವೈಸಿ ಮತ್ತೊಬ್ಬ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ: ಬಿಜೆಪಿ ಮುಖಂಡ

ಐಎಎನ್ಎಸ್
Published 5 ಡಿಸೆಂಬರ್ 2021, 15:37 IST
Last Updated 5 ಡಿಸೆಂಬರ್ 2021, 15:37 IST
ಸುಬ್ರತ್ ಪಾಠಕ್
ಸುಬ್ರತ್ ಪಾಠಕ್   

ನವದೆಹಲಿ: ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಮತ್ತೊಬ್ಬ ಮೊಹಮ್ಮದ್ ಅಲಿ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಹಾಗೂ ಉತ್ತರ ಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬ್ರತ್ ಪಾಠಕ್ ಹೇಳಿದ್ದಾರೆ.

ಸುದ್ದಿ ಸಂಸ್ಥೆ 'ಐಎಎನ್‌ಎಸ್‌'ಗೆ ವಿಶೇಷ ಸಂದರ್ಶನ ನೀಡಿದ ಕನೌಜ್ ಲೋಕಸಭಾ ಕ್ಷೇತ್ರದ ಸಂಸದ ಪಾಠಕ್, ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರನ್ನು ಜನರು ಮೆಚ್ಚಿದ್ದು, ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

'ಆಯೇಗಾ ತೋ ಯೋಗಿ ಹೈ' (ಯೋಗಿ ಮಾತ್ರ ಬರುತ್ತಾರೆ). ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ ಎಂದು ಹೇಳಿದರು.

ADVERTISEMENT

ಉತ್ತರ ಪ್ರದೇಶದಲ್ಲಿ ಸ್ಪರ್ಧಿಸುವುದಾಗಿ ಓವೈಸಿ ಹೇಳಿದ್ದು, ಎನ್‌ಆರ್‌ಸಿ ಹಾಗೂ ಸಿಎಎ ರದ್ದುಗೊಳಿಸಲು ಒತ್ತಾಯಿಸಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಠಕ್, 'ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದುಪಕ್ಷಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ. ಅವರು (ಓವೈಸಿ) ರಾಷ್ಟ್ರೀಯ ಪಕ್ಷವಾಗಿಸಲು ಯತ್ನಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಅವರನ್ನು ಸ್ವಾಗಿಸುತ್ತೇನೆ. ಅವರು ಮತಾಂಧತೆಯನ್ನು ಯುಪಿಯಲ್ಲೂ ಹರಡಿ ಮತ್ತೊಬ್ಬ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ. ದೇಶ ವಿಭಜನೆಯ ಏಕೈಕ ಅಜೆಂಡಾವನ್ನು ಹೊಂದಿದ್ದಾರೆ. ಆದರೆ ಅವರ ಅಜೆಂಡಾವನ್ನು ನಿರ್ನಾಮ ಮಾಡುವುದು ನಮ್ಮ ಗುರಿಯಾಗಿದೆ' ಎಂದು ಹೇಳಿದರು.

ಬಿಜೆಪಿ ಹಿಂದುತ್ವದ ವಿಷಯವನ್ನು ಎತ್ತದಿದ್ದರೆ ಮತ್ತೆ ಯಾರು ಎತ್ತುತ್ತಾರೆ ಎಂದು ಪಾಠಕ್ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.