ADVERTISEMENT

Covd-19 Vaccine Update | 3ನೇ ಹಂತದ ಪ್ರಯೋಗಕ್ಕೆ ಕೋವಾಕ್ಸಿನ್ ಲಸಿಕೆ

ಏಜೆನ್ಸೀಸ್
Published 27 ಅಕ್ಟೋಬರ್ 2020, 5:23 IST
Last Updated 27 ಅಕ್ಟೋಬರ್ 2020, 5:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆ ಯುವ ಮತ್ತು ಹಿರಿಯರಲ್ಲಿ ಪ್ರಬಲ ರೋಗನಿರೋಧಕ ಪ್ರತಿಕಣಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆ ಕೋವಾಕ್ಸಿನ್‌ ಮೂರನೇ ಹಂತದ ಮಾನವ ಪ್ರಯೋಗಗಳಿಗೆ ಪ್ರವೇಶಿಸಲಿದೆ.

ಭರವಸೆ ಹುಟ್ಟುಹಾಕಿದ ಆಕ್ಸ್‌ಫರ್ಡ್ ಲಸಿಕೆ

ಲಸಿಕೆ ತಯಾರಿಕ ಪ್ರಕ್ರಿಯೆಯಲ್ಲಿ ಜಾಗತಿಕ ಓಟದ ಮುಂಚೂಣಿಯಲ್ಲಿರುವ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಕೊರೊನಾ ವೈರಸ್ ಲಸಿಕೆ ಯುವ ಮತ್ತು ಹಿರಿಯರಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದೆ. ಅಸ್ಟ್ರಾಜೆನೆಕಾದ ಈ ಪ್ರಕಟಣೆಯು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ದೇಶಗಳಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ.

ADVERTISEMENT

ಕೊರೊನಾ ವೈರಸ್ ಲಸಿಕೆ ವಯಸ್ಸಾದವರಲ್ಲಿ ಕಡಿಮೆ ಪ್ರತಿಕೂಲ ಪ್ರತಿಕಣಗಳನ್ನು ಉಂಟುಮಾಡಿದೆ ಎಂದು ಬ್ರಿಟಿಷ್ ಔಷಧ ತಯಾರಕ ಅಸ್ಟ್ರಾಜೆನೆಕಾ ಕಂಪನಿ ಹೇಳಿದೆ.

'ವಯಸ್ಸಾದ ಮತ್ತು ಕಿರಿಯ ವಯಸ್ಕರ ನಡುವೆ ಇಮ್ಯುನೊಜೆನಿಸಿಟಿ (ರೋಗನಿರೋಧಕ ಪ್ರತಿಕಣಗಳನ್ನುಪ್ರಚೋದಿಸುವ) ಪ್ರತಿಕಣಗಳು ಒಂದೇ ತೆರನಾಗಿತ್ತು ಮತ್ತು ಕೋವಿಡ್ -19 ರೋಗದ ತೀವ್ರತೆಯು ಹೆಚ್ಚಾಗಿದ್ದ ವಯಸ್ಸಾದವರಲ್ಲಿ ರಿಯಾಕ್ಟೋಜೆನಿಸಿಟಿ (ವ್ಯಾಕ್ಸಿನೇಷನ್ ನಂತರ ಶೀಘ್ರದಲ್ಲೇ ಸಂಭವಿಸುವ ಪ್ರತಿಕ್ರಿಯೆಗಳ ಉಪವಿಭಾಗ) ಕಡಿಮೆ ಇತ್ತು' ಎಂದು ಅಸ್ಟ್ರಾಜೆನೆಕಾ ವಕ್ತಾರರು ಹೇಳಿದ್ದಾರೆ.

ಮೂರನೇ ಹಂತದ ಪ್ರಯೋಗಕ್ಕೆ ಕೋವಾಕ್ಸಿನ್

ಕೋವಿಡ್-19 ವಿರುದ್ಧದ ಸ್ಥಳೀಯ ಲಸಿಕೆಯಾದ ಕೋವಾಕ್ಸಿನ್ ಲಸಿಕೆಯ ಮಾನವ ಪ್ರಯೋಗದ ಮೂರನೇ ಹಂತವು ಶೀಘ್ರದಲ್ಲೇ ಭುವನೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಪ್ರಾರಂಭವಾಗಲಿದೆ. ಕೊರೊನಾ ವೈರಸ್ ವಿರುದ್ಧ ಸೂಕ್ತವಾದ ಲಸಿಕೆಗಾಗಿ ನಡೆಯುತ್ತಿರುವ ಹುಡುಕಾಟವು ಬಹುತೇಕ ಅಂತಿಮ ಹಂತಕ್ಕೆ ಬಂದಿದೆ ಎಂದು ಕೊವಾಕ್ಸಿನ್ ಮಾನವ ಪ್ರಯೋಗದ ಪ್ರಧಾನ ತನಿಖಾಧಿಕಾರಿ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಸ್‌ಯುಎಂ ಆಸ್ಪತ್ರೆಯ ಕಮ್ಯುನಿಟಿ ಔಷಧ ವಿಭಾಗದ ಪ್ರಾಧ್ಯಾಪಕ ಡಾ.ಇ. ವೆಂಕಟ ರಾವ್ ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದೇಶದಾದ್ಯಂತ ಆಯ್ಕೆ ಮಾಡಿದ 21 ವೈದ್ಯಕೀಯ ಸಂಸ್ಥೆಗಳಲ್ಲಿ ಐಎಂಎಸ್ ಮತ್ತು ಎಸ್‌ಯುಎಂ ಆಸ್ಪತ್ರೆ ಸೇರಿದ್ದು, ಇಲ್ಲಿ ಮೂರನೇ ಹಂತದ ಪ್ರಯೋಗವನ್ನು ನಡೆಸಲಾಗುವುದು.

ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ ಲಸಿಕೆಯನ್ನು ಮೂರನೇ ಹಂತದ ಪ್ರಯೋಗಕ್ಕೆ ಒಳಪಡಿಸಲು ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ಅನುಮೋದನೆ ಪಡೆದುಕೊಳ್ಳಲಾಗಿದೆ.

ಲಸಿಕೆ ಸಾರ್ವಜನಿಕ ವಿತರಣೆಗೆಇಂಗ್ಲೆಂಡ್ ಆಸ್ಪತ್ರೆ ತಯಾರಿ

ಮುಂದಿನ ತಿಂಗಳ ಆರಂಭದಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾದ ಕೊರೊನಾ ವೈರಸ್ ಲಸಿಕೆಯ ಮೊದಲ ಬ್ಯಾಚ್‌ಗಳನ್ನು ಸ್ವೀಕರಿಸಲು ಸಿದ್ಧವಾಗಿರುವಂತೆ ಲಂಡನ್‌ನ ಪ್ರಮುಖ ಆಸ್ಪತ್ರೆ ಟ್ರಸ್ಟ್‌ಗೆ ತಿಳಿಸಲಾಗಿದೆ ಎಂದು ಯುಕೆ ಮಾಧ್ಯಮ ವರದಿ ಸೋಮವಾರ ತಿಳಿಸಿದೆ.

42,000 ಸ್ವಯಂಸೇವಕರ ನೇಮಕ

ಜರ್ಮನ್‌ ಔಷಧ ಕಂಪನಿ ಬಯೋಎನ್‌ಟೆಕ್ ಜೊತೆ ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಅಮೆರಿಕದ ಔಷಧ ತಯಾರಕ ಫಿಜರ್, ಎರಡನೇ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗಾಗಿ 42,113 ಸ್ವಯಂಸೇವಕರನ್ನು ದಾಖಲಿಕೊಂಡಿದೆ.

ತಾನು ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆಯ ಅಮೆರಿಕದ ಅನುಮೋದನೆಗಾಗಿ ನವೆಂಬರ್ ಅಂತ್ಯದಲ್ಲಿ ಸಲ್ಲಿಸಬಹುದೆಂದು ಫಿಜರ್ ಹೇಳಿದೆ. ಈ ಮೂಲಕ ಈ ವರ್ಷದ ಅಂತ್ಯದ ವೇಳೆಗೆ ಅಮೆರಿಕದಲ್ಲಿಲಸಿಕೆ ಲಭ್ಯವಾಗುವ ಸಾಧ್ಯತೆಯು ದಟ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.