ADVERTISEMENT

ಪದ್ಮಪ್ರಶಸ್ತಿ ಪುರಸ್ಕೃತೆ, ಮಧ್ಯಪ್ರದೇಶದ ಬುಡಕಟ್ಟು ಹೋರಾಟಗಾರ್ತಿ ಬಿಜೆಪಿಗೆ

ಪಿಟಿಐ
Published 7 ಅಕ್ಟೋಬರ್ 2024, 2:32 IST
Last Updated 7 ಅಕ್ಟೋಬರ್ 2024, 2:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಭೋಪಾಲ್‌: ಪದ್ಮಪ್ರಶಸ್ತಿ ಪುರಸ್ಕೃತೆ, ಬುಡಕಟ್ಟು ಹೋರಾಟಗಾರ್ತಿ ದುರ್ಗಾ ಬಾಯಿ ವ್ಯಾಮ್‌ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ಪ್ರೇರಣೆಗೊಂಡು ಅವರು ಕೇಸರಿ ಪಕ್ಷ ಸೇರಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.

ಯಾದವ್‌ ಅವರು ದುರ್ಗಾ ಅವರ ಮನೆಗೆ ತೆರಳಿ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ. ಬಳಿಕ ಮಾತನಾಡಿದ ಸಿಎಂ, 2022ರ ಪದ್ಮಪ್ರಶಸ್ತಿ ಪುರಸ್ಕೃತೆ ತಮ್ಮನ್ನು ಭೇಟಿಯಾಗಲು ಬಯಸಿದ್ದರು ಎಂದಿದ್ದಾರೆ.

ADVERTISEMENT

ರಾಣಿ ದುರ್ಗಾವತಿ ಅವರ ವೈಭವವನ್ನು ಪ್ರಚುರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ. ನರೇಂದ್ರ ಮೋದಿ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ ಹಾಗೂ ತಮ್ಮ ಸಮುದಾಯದ ಬೆನ್ನಿಗೆ ನಿಂತಿದೆ ಎಂಬುದನ್ನು ಅರಿತು ಗೊಂಡಾ ಸಮುದಾಯದ ಪ್ರಮುಖ ಹೋರಾಟಗಾರ್ತಿ ದುರ್ಗಾ ಅವರು ಬಿಜೆಪಿ ಸೇರಿದ್ದಾರೆ ಎಂದು ತಿಳಿಸಿದ್ದಾರೆ.

6ನೇ ಶತಮಾನದಲ್ಲಿ ಮೊಘಲರ ವಿರುದ್ಧ ಹೋರಾಡಿದ್ದ ರಾಣಿ ದುರ್ಗಾವತಿ, ಗೊಂಡಾ ಸಾಮ್ರಾಜ್ಯದ ದಂತಕತೆ ಎನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.