ನವದೆಹಲಿ: ಅಮರನಾಥಯಾತ್ರೆ ಮಾರ್ಗದಲ್ಲಿ ಭಯೋತ್ಪಾದನೆ ದಾಳಿ ನಡೆಸಲು ಪಾಕಿಸ್ತಾನ ಸೇನೆ ಉಗ್ರರಿಗೆ ನೆರವಾಗುತ್ತಿದೆ ಎಂದು ಭಾರತೀಯ ಸೇನೆ ಶುಕ್ರವಾರ ಗಂಭೀರ ಆರೋಪ ಮಾಡಿದೆ.
ಪಾಕಿಸ್ತಾನ ಸೇನೆಯ ಸಹಕಾರದೊಂದಿಗೆ ಭಯೋತ್ಪಾದಕರು ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ, ಈ ಮಾರ್ಗದಲ್ಲಿ ಯಾತ್ರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದು ಇದಕ್ಕೆ ಪೂರಕವಾಗಿಅಮರನಾಥಯಾತ್ರೆ ಮಾರ್ಗದಲ್ಲಿ ಸ್ಫೋಟಕಗಳು ಸೇರಿದಂತೆ ಸುಧಾರಣ ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೆ.ಜನರಲ್ ಕೆ.ಎಸ್. ಜೆ ಧಿಲ್ಲೋನ್ ಹೇಳಿದ್ದಾರೆ.
ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆಯ ಅಧಿಕಾರಿಗಳು ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ಅಮರನಾಥಯಾತ್ರೆಯ ಮಾರ್ಗದ ಪ್ರದೇಶಗಳಲ್ಲಿ ಸೇನೆಯು ಕಳೆದು ಎರಡು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭೂಮಿಯಲ್ಲಿ ಹುದುಗಿಟ್ಟಿದ್ದ ಸ್ಫೋಟಕಗಳು ಮತ್ತು ಟೆಲಿಸ್ಕೋಪಿಕ್ 24 ಅಮೆರಿಕನ್ ರೈಫಲ್ ದೊರೆತಿದೆ. ಇದರ ಹಿಂದೆ ಪಾಕಿಸ್ತಾನ ಸೇನೆಯ ಕೈವಾಡ ಇರುವುದು ಸ್ಪಷ್ಟ ಎಂದುಕೆ.ಎಸ್. ಜೆ ಧಿಲ್ಲೋನ್ ಹೇಳಿದ್ದಾರೆ.
ಇದೇ ವೇಳೆ ವಶಪಡಿಸಿಕೊಂಡಿರುವ ರೈಫಲ್ ಮತ್ತು ಸ್ಫೋಟಕಗಳನ್ನು ಪ್ರದರ್ಶನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.