ADVERTISEMENT

ಜಮ್ಮು ಡ್ರೋನ್ ದಾಳಿ ಹಿಂದೆ ಪಾಕ್ ಮೂಲದ ಉಗ್ರ ಸಂಘಟನೆಯ ಕೈವಾಡ: ಡಿಜಿಪಿ

ಪಿಟಿಐ
Published 2 ಜುಲೈ 2021, 11:20 IST
Last Updated 2 ಜುಲೈ 2021, 11:20 IST
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್   

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಡ್ರೋನ್ ಮೂಲಕ ಶಸ್ತ್ರಾಸ್ತ್ರ, ಐಇಡಿ ಸ್ಪೋಟಕ ಹಾಗೂ ಮಾದಕ ವಸ್ತುಗಳನ್ನು ಬೀಳಿಸುವುದರ ಹಿಂದೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಕೈವಾಡವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ.

'ಡ್ರೋನ್ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಮತ್ತು ಜೈಶ್‌–ಇ–ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಕೈವಾಡ ಇರುವ ಸಾಧ್ಯತೆಯಿದೆ. ಗಡಿ ಪ್ರದೇಶದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿಯತ್ತ ಗಮನ ಹರಿಸಬೇಕಾದ ಸಮಯ ಬಂದಿದೆ' ಎಂದು ಹೇಳಿದ್ದಾರೆ.

ಭಯೋತ್ಪಾದನಾ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಲು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಜಮ್ಮು ಮತ್ತು ಕಾಶ್ಮೀರದ ವಿಮಾನ ನಿಲ್ದಾಣದಲ್ಲಿನ ವಾಯುಪಡೆ ನೆಲೆಯ ಮೇಲೆ ಇತ್ತೀಚಿನ ಡ್ರೋನ್ ಬಾಂಬ್ ದಾಳಿ ಪ್ರಕರಣದ ಬೆನ್ನಲ್ಲೇ ಡ್ರೋನ್‌ಗಳನ್ನು ಎದುರಿಸಲು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಕಥುವಾ ಜಿಲ್ಲೆಯ 27ನೇ ಮೂಲ ನೇಮಕಾತಿ ತರಬೇತಿ ಕೋರ್ಸ್‌ನ (ಬಿಆರ್‌ಟಿಸಿ) ನಿರ್ಗಮನ ಪಥ ಸಂಚಲನದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಜಮ್ಮುವಿನ ವಾಯುಪಡೆಯ ವಿಮಾನ ನಿಲ್ದಾಣದೊಳಗೆ ಅವಳಿ ದಾಳಿಯ ಹಿಂದೆ ಎಲ್‌ಇಟಿ ಕೈವಾಡವಿದೆ ಎಂದು ಶಂಕಿಸಲಾಗಿದೆ ಎಂದು ತಿಳಿಸಿದರು.

ತನಿಖೆ ಪ್ರಗತಿಯಲ್ಲಿದೆ. ನಿಜವಾಗಿಯೂ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಹೇಳುವ ಹಂತಕ್ಕೆ ಬಂದಿಲ್ಲ. ಆದರೆ ಲಷ್ಕರ್ ಉಗ್ರ ಸಂಘಟನೆಈ ಹಿಂದೆಯೂ ಇಂತಹ ಹಲವು ಕೃತ್ಯಗಳಲ್ಲಿ ಭಾಗಿಯಾಗಿವೆ. ಆದ್ದರಿಂದ ತನಿಖೆಯ ಈ ಹಂತದಲ್ಲಿ ಎಲ್‌ಇಟಿ ಮೇಲೆ ಶಂಕೆ ವ್ಯಕ್ತವಾಗಿದೆ. ಮತ್ತಷ್ಟು ನಿಖರ ತನಿಖೆಯ ಬಳಿಕ ಸ್ಪಷ್ಟ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.