ಇಸ್ಲಾಮಾಬಾದ್: ಆಡಿಯೊ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಪಾಕಿಸ್ತಾನದ ಸಚಿವ ಸಂಪುಟ ಭಾನುವಾರ ಔಪಚಾರಿಕವಾಗಿ ಅನುಮೋದನೆ ನೀಡಿದೆ.
ಆಡಿಯೊ ಸೋರಿಕೆಗೆ ಬಗ್ಗೆ ಪರಿಶೀಲನೆ ನಡೆಸಲು ಈಚೆಗೆ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಇಮ್ರಾನ್ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತು.
‘ಈ ವಿಚಾರವು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ್ದಾಗಿದ್ದು, ಕಾನೂನು ಕ್ರಮ ಅಗತ್ಯ’ ಎಂದು ಸಮಿತಿ ಹೇಳಿದೆ.
ಇಮ್ರಾನ್ ಖಾನ್, ಮಾಜಿ ಸಚಿವ ಅಸಾದ್ ಉಮರ್ ಮತ್ತು ಮುಖ್ಯ ಕಾರ್ಯದರ್ಶಿ ಆಜಂ ಖಾನ್ ಅವರು ಅಮೆರಿಕದ ಪತ್ರದ ಬಗ್ಗೆ ಚರ್ಚಿಸುತ್ತಿರುವ ಎರಡು ಆಡಿಯೊಗಳು ಸೋರಿಕೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.