ADVERTISEMENT

ಗುಜರಾತ್‌ನ ಕಚ್‌ ಸಮೀಪ ಪಾಕ್‌ ಡ್ರೋನ್‌ ಉರುಳಿಸಿದ ಸೇನೆ?

ಏಜೆನ್ಸೀಸ್
Published 26 ಫೆಬ್ರುವರಿ 2019, 12:43 IST
Last Updated 26 ಫೆಬ್ರುವರಿ 2019, 12:43 IST
   

ಭುಜ್‌(ಗುಜರಾತ್‌): ಗುಜರಾತ್‌ನ ಕಚ್‌ ಸಮೀಪದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಮಾನವ ರಹಿತ ವೈಮಾನಿಕ ವಾಹನ(ಯುಎವಿ)ವನ್ನು ಮಂಗಳವಾರ ಹೊಡೆದು ಉರುಳಿಸಲಾಗಿದೆ. ಬಾಲಾಕೋಟ್‌ನಲ್ಲಿ ಜೈಷ್‌ ಉಗ್ರರ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಬೆನ್ನಲೇ ಭಾರತದ ಗಡಿಯೊಳಗೆ ಡ್ರೋನ್‌ ಪತ್ತೆಯಾಗಿದೆ.

ಕಚ್‌ ಜಿಲ್ಲೆಯ ನನ್ಘಾತಾದ್‌ ಗ್ರಾಮದಲ್ಲಿ ಡ್ರೋನ್‌ ಅವಶೇಷಗಳು ಪತ್ತೆಯಾಗಿವೆ. ಬೆಳಿಗ್ಗೆ 6 ಗಂಟೆಗೆ ದೊಡ್ಡ ಸದ್ದು ಕೇಳಿದ ಗ್ರಾಮಸ್ಥರು, ಸದ್ದು ಬಂದ ಜಾಗಕ್ಕೆ ಓಡಿದ್ದಾರೆ. ಅಲ್ಲಿ ಡ್ರೋನ್‌ ಅವಶೇಷಗಳು ಬಿದ್ದಿರುವುದನ್ನು ಗಮನಿಸಿದ್ದಾರೆ.

ಭಾರತೀಯ ಶಸ್ತ್ರ ಪಡೆಯು ಪಾಕಿಸ್ತಾನಕ್ಕೆ ಸೇರಿದ ಡ್ರೋನ್‌ ಉರುಳಿಸಿದೆಯೇ ಎಂಬ ಪ್ರಶ್ನೆಗೆ ಪೊಲೀಸ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ’ಅಂಥದೊಂದು ಘಟನೆ ನಡೆದಿದೆ, ನಾವು ಆ ಬಗ್ಗೆ ತನಿಖೆ ಕೈಗೊಂಡಿದ್ದೇವೆ’ ಎಂದಿದ್ದಾರೆ.

ADVERTISEMENT

ಜೈಷ್‌ ಉಗ್ರ ಶಿಬಿರದ ಮೇಲೆ ಭಾರತೀಯ ವಾಯುಪಡೆ ಮಂಗಳವಾರ ಬೆಳಗಿನ ಜಾವ ದಾಳಿ ನಡೆಸಿದೆ.

ಇನ್ನಷ್ಟು ಓದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.