ADVERTISEMENT

ಅಪ್ರಚೋದಿತ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದ ಪಾಕ್‌

ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ

ಪಿಟಿಐ
Published 10 ಅಕ್ಟೋಬರ್ 2020, 7:18 IST
Last Updated 10 ಅಕ್ಟೋಬರ್ 2020, 7:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಮತ್ತುಅಂತರರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ಸೇನೆಯು ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ.

ಪಾಕಿಸ್ತಾನಿ ಸೇನೆಯು ಪೂಂಚ್‌ ಜಿಲ್ಲೆಯ ಮಕೋಟೆ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ಶುಕ್ರವಾರ ರಾತ್ರಿ ಶೆಲ್‌ ಮತ್ತು ಮೋಟರ್‌ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯು ‍ಪ್ರತಿದಾಳಿ ನಡೆಸಿದೆ ಎಂದು ರಕ್ಷಣಾ ಇಲಾಖೆ ವಕ್ತಾರ ತಿಳಿಸಿದರು.

ಈ ಅಪ್ರಚೋದಿತ ದಾಳಿಯಿಂದ ನಾಗರಿಕರು ಭಯಬೀತರಾಗಿದ್ದಾರೆ. ಬೆಳಿಗ್ಗೆ4.30ರ ತನಕ ಪಾಕಿಸ್ತಾನಿ ಸೇನೆಯು ಶೆಲ್‌ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

ಪಾಕಿಸ್ತಾನಿ ಸೇನೆಯು ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಭಾಗದಲ್ಲೂ ಅಪ್ರಚೋದಿತ ದಾಳಿ ನಡೆಸಿದ್ದು, ಶುಕ್ರವಾರ ರಾತ್ರಿ 11.45 ರಿಂದ ಶನಿವಾರ ಬೆಳಿಗ್ಗೆ 4.40 ತನಕ ದಾಳಿ ನಡೆಸಿದೆ. ಆದರೆ ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.