ADVERTISEMENT

ಗಡಿದಾಟಿದ ಪಾಕ್‌ ಯುದ್ಧ ವಿಮಾನಗಳು; ಭಾರತದ ಸೇನಾ ವಲಯದ ಮೇಲೆ ಬಾಂಬ್‌ ದಾಳಿ

ಏಜೆನ್ಸೀಸ್
Published 27 ಫೆಬ್ರುವರಿ 2019, 6:25 IST
Last Updated 27 ಫೆಬ್ರುವರಿ 2019, 6:25 IST
ಪೂಂಚ್‌ ವಲಯದಲ್ಲಿ ವೈಮಾನಿಕ ದಾಳಿ– ಸಾಂದರ್ಭಿಕ ಚಿತ್ರ
ಪೂಂಚ್‌ ವಲಯದಲ್ಲಿ ವೈಮಾನಿಕ ದಾಳಿ– ಸಾಂದರ್ಭಿಕ ಚಿತ್ರ   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಹಾಗೂ ನೌಶೆರಾ ಪ್ರದೇಶಗಳಲ್ಲಿನ ಭಾರತದ ವಾಯು ವಲಯ ದಾಟಿ ಪಾಕಿಸ್ತಾನ ಯುದ್ಧ ವಿಮಾನಗಳು ಒಳನುಸುಳಿದ್ದು, ಭಾರತೀಯ ಯುದ್ಧ ವಿಮಾನಗಳನ್ನು ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭಾರತದ ವಾಯು ವಲಯವನ್ನು ದಾಟಿ ಮರಳುವ ಮುನ್ನ ಪಾಕಿಸ್ತಾನ ಯುದ್ಧ ವಿಮಾನಗಳು ಬಾಂಬ್‌ಗಳನ್ನು ಎಸೆದಿವೆ. ರಜೌರಿ ಪ್ರದೇಶದಲ್ಲಿ ಭಾರತೀಯ ಸೇನಾ ವಲಯದ ಮೇಲೆ ಬಾಂಬ್‌ಗಳನ್ನು ಎಸೆಯಲಾಗಿದೆ.

ಬಾಂಬ್‌ ದಾಳಿಯಿಂದಾಗಿ ಸಂಭವಿಸಿರುವ ಹಾನಿ, ಪ್ರಾಣಾಪಾಯಗಳ ಬಗ್ಗೆ ತಕ್ಷಣ ಮಾಹಿತಿ ಲಭ್ಯವಾಗಿಲ್ಲ. ಬುಧವಾರ ಬೆಳಿಗ್ಗೆ ನೌಶೆರಾ ಮತ್ತು ಪೂಂಚ್‌ ವಲಯದ ವಾಯುಭಾಗದಲ್ಲಿ ಪಾಕಿಸ್ತಾನದ ಜೆಟ್‌ಗಳು ಕಾಣಿಸಿಕೊಂಡಿವೆ.

ADVERTISEMENT

ಗಸ್ತು ತಿರುಗುತ್ತಿದ್ದ ಭಾರತೀಯ ವಾಯು ಪಡೆಯ ವಿಮಾನಗಳನ್ನು ಪಾಕಿಸ್ತಾನದ ಜೆಟ್‌ಗಳನ್ನು ಕೆಲವೇ ನಿಮಿಷಗಳಲ್ಲಿ ಹಿಮ್ಮೆಟ್ಟಿಸಿರುವುದಾಗಿ ಮಾಹಿತಿ ಸಿಕ್ಕಿದೆ.

ಇನ್ನಷ್ಟು ಓದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.